Sunday, May 5, 2024
Homeತಾಜಾ ಸುದ್ದಿರೈಲು ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ ದರದಲ್ಲಿ ಭಾರಿ ಏರಿಕೆ! ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರವುದನ್ನು...

ರೈಲು ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ ದರದಲ್ಲಿ ಭಾರಿ ಏರಿಕೆ! ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರವುದನ್ನು ತಡೆಯಲು ಮಹತ್ವದ ನಿರ್ಧಾರ

spot_img
- Advertisement -
- Advertisement -

ಬೆಂಗಳೂರು:ನೈರುತ್ಯ ರೈಲ್ವೆ ಇಲಾಖೆಯು ರೈಲು ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ ದರ ವನ್ನು ಒಮ್ಮಿಂದೊಮ್ಮೆಲೆ ಹೆಚ್ಚಳ ಮಾಡಿದೆ.ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ಟಿಕೆಟ್ ದರ ಹಿಂದೆ 10 ರೂಪಾಯಿ ಇತ್ತು. ಆದರೆ ಈಗ ರೈಲ್ವೆ ಇಲಾಖೆಯು ಅದನ್ನು 50 ರೂಪಾಯಿಗೆ ಏರಿಕೆ ಮಾಡಿದೆ.

ಈ ಬದಲಾದ ದರ ಇಂದಿನಿಂದ ಜಾರಿಗೆ ಬರಲಿದ್ದು ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಲಾಖೆ ಹೇಳಿಕೊಂಡಿದೆ.

ಈಗಾಗಲೇ ಪ್ರಮುಖ ರೈಲ್ವೆ ನಿಲ್ದಾಣಗಳಾದ ಕೃಷ್ಣರಾಜಪುರಂ, ಬಂಗಾರ ಪೇಟೆ, ತುಮಕೂರು, ಹೊಸೂರು, ಧರ್ಮಪುರಿ, ಕೆಂಗೇರಿ, ಮಂಡ್ಯ , ಹಿಂದೂಪುರ, ಪೆನುಕೊಂಡ, ಯಲಹಂಕ, ಬಾಣಸವಾಡಿ, ಕಾರ್ಮೆಲಾರಂ ಮತ್ತು ವೈಟ್ ಫೀಲ್ಡ್ ರೈಲ್ವೆ ನಿಲ್ದಾಣದಲ್ಲಿ 10 ರೂಪಾಯಿ ಇದ್ದ ಪ್ಲಾಟ್ ಫಾರ್ಮ್ ಟಿಕೆಟ್ ದರವನ್ನ 50 ರೂಪಾಯಿಗೆ ಏರಿಸಿದೆ.

- Advertisement -
spot_img

Latest News

error: Content is protected !!