Thursday, June 4, 2026
Homeತಾಜಾ ಸುದ್ದಿಎಸಿಬಿ ರದ್ದುಗೊಳಿಸಿದ ವಿಚಾರ: ಚುನಾವಣಾ ಪ್ರಣಾಳಿಕೆ ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರ: ಸಿಎಂ

ಎಸಿಬಿ ರದ್ದುಗೊಳಿಸಿದ ವಿಚಾರ: ಚುನಾವಣಾ ಪ್ರಣಾಳಿಕೆ ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರ: ಸಿಎಂ

- Advertisement -
- Advertisement -

ಬೆಂಗಳೂರು: ಎಸಿಬಿ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶದ ಕುರಿತಾಗಿ ಮುಂದಿನ ಸಚಿವ ಸಂಪುಟಸಭೆಯಲ್ಲಿ ಚರ್ಚಿಸಿ, ನಮ್ಮ ಚುನಾವಣಾ ಪ್ರಣಾಳಿಕೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದಲ್ಲಿ ಶುಕ್ರವಾರ ಮಾತನಾಡಿದ ಅವರು, ಎಸಿಬಿ ರದ್ದು ಕುರಿತಾಗಿ ಗುರುವಾರ ಹೈಕೋರ್ಟ್ ಆದೇಶ ಆಗಿದೆ. ನಮ್ಮ ಪಕ್ಷದ ಪ್ರಣಾಳಿಕೆ ಗಮನದಲ್ಲಿಟ್ಟುಕೊಂಡು, ಹೈಕೋರ್ಟ್ ಆದೇಶ ಕೊಟ್ಟಿರೋದನ್ನು ಗಮನಿಸಿದೆ. ನಮ್ಮ ಪಕ್ಷದ ಪ್ರಣಾಳಿಕೆ ಮೂಲ ಪ್ರತಿ ತೆಗೆದುಕೊಂಡು ಚರ್ಚೆ ಮಾಡ್ತೀವಿ. ಮುಂದೆ ಏನೆಲ್ಲಾ ಮಾಡಬಹುದು ಎಂದು ತೀರ್ಮಾನ ಮಾಡ್ತೀವಿ ಎಂದರು.

- Advertisement -

Latest News

error: Content is protected !!