Friday, August 28, 2026
Homeತಾಜಾ ಸುದ್ದಿಕಾಂತಾರದಲ್ಲಿ ನಟಿಸಿದ ಕಲಾವಿದರ ಸಂಭಾವನೆ ಬಗ್ಗೆ ಹೊರಬಿತ್ತು ಮಾಹಿತಿ: ಚಿತ್ರದಿಂದ ರಿಷಬ್ ಶೆಟ್ಟಿಗೆ ಸಿಕ್ಕಿದ್ದೆಷ್ಟು?

ಕಾಂತಾರದಲ್ಲಿ ನಟಿಸಿದ ಕಲಾವಿದರ ಸಂಭಾವನೆ ಬಗ್ಗೆ ಹೊರಬಿತ್ತು ಮಾಹಿತಿ: ಚಿತ್ರದಿಂದ ರಿಷಬ್ ಶೆಟ್ಟಿಗೆ ಸಿಕ್ಕಿದ್ದೆಷ್ಟು?

- Advertisement -
- Advertisement -

ವಿಶ್ವ ಮಟ್ಟದಲ್ಲಿ ಭಾರೀ ಸದ್ದು ಮಾಡಿದ ಸಿನಿಮಾ ಕಾಂತಾರದ ಒಟ್ಟು ಬಜೆಟ್‌ ಕೇವಲ 15 ಕೋಟಿ ರೂಪಾಯಿ. ಆದ್ರೆ ಸಿನಿಮಾ ಗಳಿಸಿದ್ದು 406 ಕೋಟಿ ರೂಪಾಯಿ.  ಈ ಸಿನಿಮಾ ಮಾಡಿದ ದಾಖಲೆಗಳಿಗೆ ಲೆಕ್ಕವೇ ಇಲ್ಲ. ಹಲವು ಪ್ರಶಸ್ತಿಗಳನ್ನು ಸಿನಿಮಾ ಬಾಚಿಕೊಂಡಿದೆ. ಇದೀಗ  ಈ ಚಿತ್ರದಲ್ಲಿ ನಟಿಸಿದ ಕಲಾವಿದರ ಸಂಭಾವನೆ ಬಗ್ಗೆ ಮಾಹಿತಿ ಹೊರ ಬಿದ್ದಿದೆ. 

ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜತೆ ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಮೊದಲಾದವರು ನಟಿಸಿದ್ದಾರೆ. ಕಿಶೋರ್ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಪ್ರಮೋದ್ ಶೆಟ್ಟಿ ಅವರು 60ಲಕ್ಷ, ಅಚ್ಯುತ್ ಕುಮಾರ್ 40 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಇನ್ನು ನಟಿ ಸಪ್ತಮಿ ಗೌಡ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ರಿಷಬ್ ಶೆಟ್ಟಿ ಅವರು 4 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!