ಮುಂಬಯಿ : ಇಂಡಿಯನ್ ಮಾಸ್ಟರ್ಸ್ ವೆಟ್‌ಲಿಫ್ಟಿಂಗ್ ತಂಡವು ಅಮೆರಿಕದ ಲಾಸ್ ವೆಗಾಸ್‌ನಲ್ಲಿ ಸೆ. 6 ರಿಂದ 13, 2025 ರವರೆಗೆ ನಡೆಯಲಿರುವ ವರ್ಲ್ಡ್ ಮಾಸ್ಟರ್ಸ್ ವೆಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದೆ. 9 ಸದಸ್ಯರ ಭಾರತೀಯ ತಂಡವು ಇಂಡಿಯಾ ಮಾಸ್ಟರ್ಸ್ ವೈಟ್‌ಲಿಫ್ಟಿಂಗ್‌ನ ಕೋಚ್ ಮತ್ತು ಕಾರ್ಯದರ್ಶಿ ಉದಯ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಸ್ಪರ್ಧಿಸಲಿದೆ. 2014 ರಿಂದ ಇಂಡಿಯಾ ಮಾಸ್ಟರ್ಸ್ ವೆಟ್‌ಲಿಫ್ಟಿಂಗ್ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಉದಯ ಶೆಟ್ಟಿಯವರು, ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಕೋಚ್ ಮತ್ತು ಅತ್ಯುತ್ತಮ ರೆಫರೀಗಳಲ್ಲಿ ಒಬ್ಬರು.
ರಾಷ್ಟ್ರೀಯ ಚಾಂಪಿಯನ್ ಆಗಿರುವ ಅವರು ಅನೇಕ ದಾಖಲೆಗಳನ್ನು ಮಾಡಿದ್ದು, ಪ್ರಸ್ತುತ ಏಷಿಯನ್ ಮಾಸ್ಟರ್ಸ್ ವೈಟ್‌ಲಿಫ್ಟಿಂಗ್ ಫೆಡರೇಷನ್‌ನ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದಾರೆ. ಜೂನ್ 2025ರಲ್ಲಿ ದೋಹಾ, ಖತಾರ್‌ನಲ್ಲಿ ನಡೆದ ಏಷಿಯನ್ ಮಾಸ್ಟರ್ಸ್ ವೈಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರ ನಾಯಕತ್ವದಲ್ಲಿ ಭಾರತೀಯ ಅಥ್ಲೀಟ್‌ಗಳು ಅತ್ಯುತ್ತಮ ಸಾಧನೆಗಳನ್ನು ಮಾಡಿದ್ದು ಹೆಚ್ಚು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಲಾಸ್ ವೆಗಾಸ್‌ನ ಭಾರತೀಯ ಕ್ರೀಡಾಪ್ರೇಮಿಗಳು ತಂಡವನ್ನು ಆತ್ಮೀಯವಾಗಿ ಸ್ವಾಗತಿಸಲು ಮತ್ತು ಬೆಂಬಲಿಸಲು ಸಜ್ಜಾಗಿದ್ದಾರೆ. ಭಾರತದ ಕ್ರೀಡಾ ಸಚಿವಾಲಯ ಮತ್ತು ಪ್ರಧಾನಮಂತ್ರಿ ಕಚೇರಿಯಿಂದ ಈ ತಂಡಕ್ಕೆ ಶುಭ ಹಾರೈಕೆ ಬಂದಿರುದಾಗಿ ತಿಳಿದು ಬಂದಿದೆ.


