Saturday, May 18, 2024
Homeಕರಾವಳಿಉಡುಪಿಉಡುಪಿ: ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ, 6 ವಿದ್ಯಾರ್ಥಿನಿಯರು ಹಠ ಮಾಡದೆ ಕಾಲೇಜಿಗೆ ಬರಬೇಕು: ಶಾಸಕ...

ಉಡುಪಿ: ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ, 6 ವಿದ್ಯಾರ್ಥಿನಿಯರು ಹಠ ಮಾಡದೆ ಕಾಲೇಜಿಗೆ ಬರಬೇಕು: ಶಾಸಕ ರಘುಪತಿ ಭಟ್

spot_img
- Advertisement -
- Advertisement -

ಉಡುಪಿ: ಹಿಜಾಬ್ ವಿವಾದದ ಕುರಿತು ಕರ್ನಾಟಕ ಹೈ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪನ್ನು ಸ್ವಾಗತಿಸುವುದಾಗಿ ಉಡುಪಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. 6 ವಿದ್ಯಾರ್ಥಿನಿಯರು ಹಠ ಮಾಡದೆ ಕಾಲೇಜಿಗೆ ಬರಬೇಕು. ಇಷ್ಟು ದಿನಗಳ ಕಾಲ ಕಾಲೇಜಿಗೆ ಬಾರದೆ ಶಿಕ್ಷಣಕ್ಕೆ ಸಮಸ್ಯೆಯಾಗಿದೆ. ಅಂತಹವರಿಗೆ ಪ್ರತ್ಯೇಕ ನೋಟ್ಸ್ ಕೂಡ ನೀಡಲಾಗುವುದು ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

‘ಶಾಲಾ ಕಾಲೇಜುಗಳಲ್ಲಿ ಧರಿಸುವ ಸಮವಸ್ತ್ರದ ಕುರಿತು ಕರ್ನಾಟಕ ಹೈಕೋರ್ಟ್ ಹೊರಡಿಸಿದ ತೀರ್ಪನ್ನು ಅತ್ಯಂತ ಸಂತೋಷದಿಂದ ಸ್ವಾಗತಿಸುತ್ತೇನೆ ‘. ಹಾಗೇ ಸಂವಿಧಾನ ಬದ್ಧವಾದ ನಿಯಮವನ್ನೇ ಧಿಕ್ಕರಿಸಲು ಹೊರಟಿದ್ದವರಿಗೆ ನ್ಯಾಯಾಲಯವೇ ತಕ್ಕ ಉತ್ತರವನ್ನು ನೀಡಿದೆ . ಈ ತೀರ್ಪು ಸಂವಿಧಾನಕ್ಕೆ ಸಿಕ್ಕ ಜಯವೆಂದೇ ನಾನು ಪರಿಗಣಿಸುತ್ತೇನೆ ಎಂದರು .

- Advertisement -
spot_img

Latest News

error: Content is protected !!