ಹಿಜಾಬ್ ವಿವಾದ ದೇಶವ್ಯಾಪಿ ಸದ್ದು ಮಾಡುತ್ತಿದ್ದು, ಈಗಾಗಲೇ ಕೋರ್ಟ್ ಹಿಜಾಬ್ ನಿರ್ಬಂಧಿಸಿ ತೀರ್ಪು ನೀಡಿದೆ. ಈ ನಡುವೆ ಕೆಪಿಸಿಸಿ ಕಚೇರಿಯಿಂದಲೇ ಹಿಜಾಬ್ ವಿವಾದ ಹುಟ್ಟಿಕೊಂಡಿದೆ ಅಂತ ಕರ್ನಾಟಕ ಬಿಜೆಪಿ ಆರೋಪಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಹಿಜಾಬ್ ಪರ ವಾದಿಸಲು ಕಾಂಗ್ರೆಸ್ ವತಿಯಿಂದಲೇ ನ್ಯಾಯವಾದಿಗಳನ್ನು ನೇಮಕ ಮಾಡಲಾಗಿತ್ತು. ಈಗ ತೀರ್ಪು ಬಂದ ನಂತರ ಅದರ ವಿರುದ್ಧ ಹೋರಾಡೋದು ಸಂವಿಧಾನಬದ್ಧ ಹಕ್ಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇಷ್ಟಾದ ಮೇಲೆ ಹಿಜಾಬ್ ವಿವಾದ ಕೆಪಿಸಿಸಿ ಕಚೇರಿಯಲ್ಲೇ ಹುಟ್ಟಿಕೊಂಡಿದ್ದು ಇನ್ನೇನು ಪುರಾವೆ ಬೇಕು ಅಂತ ಪ್ರಶ್ನಿಸಿದೆ.
ಹೈಕೋರರ್ಟ್ ಆದೇಶದಲ್ಲಿ ಅಸಮಾಧಾನವಿದ್ದರೆ ಸುಪ್ರೀಂಗೆ ಹೋಗಬಹುದು. ಅದನ್ನು ಬಿಟ್ಟು ಬಂದ್ ಮಾಡೋದು, ಬಂದ್ ಮಾಡೋದನ್ನು ಬೆಂಬಲಿಸೋದು ನ್ಯಾಯಾಂಗ ನಿಂದನೆ ಅಲ್ಲವೇ? ಬಂದ್‌ಗೆ ಬೆಂಬಲ ಸೂಚಿಸಿರುವ ಸಿದ್ದರಾಮಯ್ಯಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲವೆ? ಎಂದು ಬಿಜೆಪಿ ಕಿಡಿಕಾರಿದೆ.


