Wednesday, April 16, 2025
Homeಕರಾವಳಿಕಾಸರಗೋಡುಕಾಸರಗೋಡು; ಸರಕಾರದ ಇಲಾಖಾ ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿಯ ಹಾಲ್ ಟಿಕೆಟ್ ಕಚ್ಚಿಕೊಂಡು ಹೋದ ಗಿಡುಗ

ಕಾಸರಗೋಡು; ಸರಕಾರದ ಇಲಾಖಾ ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿಯ ಹಾಲ್ ಟಿಕೆಟ್ ಕಚ್ಚಿಕೊಂಡು ಹೋದ ಗಿಡುಗ

spot_img
- Advertisement -
- Advertisement -

ಕಾಸರಗೋಡು; ಸರಕಾರದ ಇಲಾಖಾ ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿಯ ಹಾಲ್ ಟಿಕೆಟ್ ಅನ್ನು ಗಿಡುಗ ಕಚ್ಚಿಕೊಂಡು ಹೋದ ವಿಚಿತ್ರ ಪ್ರಸಂಗ ಎ. 10 ರಂದು ಗುರುವಾರ ಕಾಸರಗೋಡಿನ ಸರಕಾರಿ ಶಾಲೆಯೊಂದರಲ್ಲಿ ನಡೆದಿದೆ.

ಗುರುವಾರ ಬೆಳಗ್ಗೆ. ಸರಕಾರಿ ಅಧಿಕಾರಿಗಳಿಗೆ ನಡೆಯುವ ಇಲಾಖಾ ಪರೀಕ್ಷೆ ಬೆಳಗ್ಗೆ 7.30ಕ್ಕೆ ನಡೆಯಬೇಕಿತ್ತು. ಪರೀಕ್ಷಾರ್ಥಿಗಳು 7 ಗಂಟೆಗೆ ಶಾಲೆ ತಲುಪುತ್ತಿದ್ದಂತೆ ಅಲ್ಲಿದ್ದ ಪರೀಕ್ಷಾರ್ಥಿಯೊಬ್ಬರ ಕೈಯಲ್ಲಿದ್ದ ಹಾಲ್ ಟಿಕೆಟ್‌ನ್ನು ಕಸಿದುಕೊಂಡು ಕಟ್ಟಡವೇರಿ
ಕುಳಿತಿದೆ. ಇದನ್ನು ಕಂಡು ಪರೀಕ್ಷಾರ್ಥಿಗಳು ಮತ್ತು ಇತರರು ಗಾಬರಿಗೊಂಡರು. ಸುಮಾರು 300 ಅಭ್ಯರ್ಥಿಗಳು ಅಲ್ಲಿದ್ದರು. ಎಲ್ಲರೂ ಸೇರಿ ಗದ್ದಲ ಮಾಡಿದರೂ ಗಿಡುಗ ಹಾಲ್ ಟಿಕೆಟ್ ಕೆಳಗೆ ಹಾಕಲಿಲ್ಲ. ಪರೀಕ್ಷಾರ್ಥಿಯು, ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲವೇನೂ ಚಿಂತೆಯಲ್ಲಿದ್ದಾಗ ಕೊನೆಯ ಗಂಟೆ ಬಾರಿಸುವ ಸ್ವಲ್ಪ ಸಮಯದ ಮೊದಲು ಗಿಡುಗ ಹಾಲ್ ಟಿಕೆಟನ್ನು ಕೆಳಗೆ ಬೀಳಿಸಿ ಹಾರಿ ಹೋಗಿದೆ. ಗಿಡುಗದ ಕಿತಾಪತಿಯ ವೀಡಿಯೋ ವೈರಲ್ ಆಗಿದೆ.

- Advertisement -
spot_img

Latest News

error: Content is protected !!