Thursday, June 4, 2026
Homeಕರಾವಳಿಕಾಸರಗೋಡುಪುತ್ತೂರು: ಕೆಎಸ್ ಆರ್ ಟಿಸಿ ಬಸ್ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತ: ಬೈಕ್...

ಪುತ್ತೂರು: ಕೆಎಸ್ ಆರ್ ಟಿಸಿ ಬಸ್ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತ: ಬೈಕ್ ಸವಾರ ಸಾವು

- Advertisement -
- Advertisement -

ಪುತ್ತೂರು: ಕೆಎಸ್ ಆರ್ ಟಿಸಿ ಬಸ್ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಕಾವು ಸಮೀಪದ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಕಾಸರಗೋಡು ಜಿಲ್ಲೆಯ ವರ್ಕಾಡಿ ಗ್ರಾಮದ ಪಾತೂರು ಸಮೀಪದ ಬದಿಮೂಲೆ ನಿವಾಸಿ ಮೋಯ್ದಿನ್‌ಕುಂಞ ಅವರ ಪುತ್ರ ಅಶ್ರಫ್ (25) ಮೃತ ಬೈಕ್ ಸವಾರ.

ಕೊಡಗು ಜಿಲ್ಲೆಯ ನಾಪೊಕ್ಲುವಿನಲ್ಲಿ ಎಲೆಕ್ಟಿಕಲ್ ಅಂಗಡಿ ಹೊಂದಿರುವ ಅಶ್ರಫ್ ಅವರು ಸೋಮವಾರ ಮನೆಗೆ ಬಂದಿದ್ದರು. ಮಂಗಳವಾರ ನಾಪೊಕ್ಲುವಿಗೆ ತೆರಳುತ್ತಿದ್ದ ವೇಳೆ ಅವಘಡ ನಡೆದಿದೆ. ಅಶ್ರಫ್ ಅವರು ಪುತ್ತೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದಾಗ ಕೊಟ್ಯಾಡಿಯಿಂದ ಪುತ್ತೂರು ಕಡೆ ಹೋಗುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ವಾಹನವೊಂದನ್ನು ಹಿಂದಿಕ್ಕುವಾಗ ಬೈಕ್‌ಗೆ ಡಿಕ್ಕಿಯಾಗಿದೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!