Monday, June 8, 2026
Homeಉದ್ಯಮಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ; ಬ್ಯಾಂಕ್ ಸಮೀಪದ ಅಲಂಕಾರು ಗುಡ್ಡೆಯಲ್ಲಿ ನಡೆದ ಅಂತಿಮ ರೂಪುರೇಷೆ

ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ; ಬ್ಯಾಂಕ್ ಸಮೀಪದ ಅಲಂಕಾರು ಗುಡ್ಡೆಯಲ್ಲಿ ನಡೆದ ಅಂತಿಮ ರೂಪುರೇಷೆ

- Advertisement -
- Advertisement -

ಉಳ್ಳಾಲ: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರೋಡೆಕೋರರು ಬ್ಯಾಂಕ್ ದರೋಡೆ ಕಾರ್ಯಾಚರಣೆಯ ಅಂತಿಮ ರೂಪುರೇಷೆಯನ್ನು ಕೆ. ಸಿ. ರೋಡ್‌ ಬಳಿಯ ಅಲಂಕಾರು ಗುಡ್ಡೆಯಲ್ಲಿ ಸಿದ್ಧಪಡಿಸಿದ್ದರು ಎಂದು ತಿಳಿಅದು ಬಂದಿದೆ.   

ತನಿಖೆಯ ವೇಳ ಲಭಿಸಿದ ಮಾಹಿತಿಯಂತೆ ಜ.17ರಂದು ಫಿಯೆಟ್‌ ಕಾರಿನಲ್ಲಿ ದರೋಡೆಗೆ ಬಂದಿದ್ದ ಆರೋಪಿಗಳು ಬೆಳಗ್ಗೆ 11.30 ಹೊತ್ತಿಗೆ ಕಲ್ಲಾಪು ದಾಟಿ ಒಳ ರಸ್ತೆಯ ಮೂಲಕ ಕೆ.ಸಿ.ರೋಡ್‌ ಬಳಿಯ ಅಲಂಕಾರ ಗುಡ್ಡೆಯನ್ನು ತಲುಪಿದ್ದರು. ನಂತರದಲ್ಲಿ ಈ 25-50 ಸೆಂಟ್ಸ್‌ ವಿಸ್ತೀರ್ಣದ ಪ್ರದೇಶವನ್ನು ಸುರಕ್ಷಿತ ಸ್ಥಳವೆಂದು ಪರಿಗಣಿ ಒಂದೂವರೆ ಗಂಟೆ ಕಾಲ ಕುಳಿತು ಯೋಜನೆ ರೂಪಿಸಿದ್ದರು. ದರೋಡೆಯ ಸಮಯ, ಹೊರಗೆ ಒಳಗೆ ವಹಿಸಬೇಕಾದ ನಿಗಾ, ಬಳಿಕ ಪರಾರಿಯಾಗುವ ಬಗೆ ಎಲ್ಲವನ್ನೂ ಇಲ್ಲಿಯೇ ನಿರ್ಧರಿಸಲಾಗಿತ್ತು ಎನ್ನಲಾಗಿದೆ.

ಇದೇ ಕಾರಣಕ್ಕಾಗಿ ಆರೋಪಿಯೋರ್ವನನ್ನು ಸ್ಥಳ ಮಹಜರಿಗಾಗಿ ಅಲಂಕಾರ ಗುಡ್ಡೆಗೆ ಕರೆತರಲಾಗಿತ್ತು.

ಇನ್ನು ಉಳೀದ ಆರೋಪಿಗಳ ಶೋಧಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. 

- Advertisement -

Latest News

error: Content is protected !!