Wednesday, June 3, 2026
Homeತಾಜಾ ಸುದ್ದಿಸುಳ್ಯ; ಕಲ್ಲುಗುಂಡಿಯಲ್ಲಿ ಮಟ್ಕಾ ಜೂಜಾಟ ಅಡ್ಡೆ ಮೇಲೆ ಪೊಲೀಸರ ದಾಳಿ

ಸುಳ್ಯ; ಕಲ್ಲುಗುಂಡಿಯಲ್ಲಿ ಮಟ್ಕಾ ಜೂಜಾಟ ಅಡ್ಡೆ ಮೇಲೆ ಪೊಲೀಸರ ದಾಳಿ

- Advertisement -
- Advertisement -

ಸುಳ್ಯ; ಸುಳ್ಯದ ನಿವಾಸಿ ಮಹಮ್ಮದ್ ಮುಸ್ತಕ್ ಎಂಬಾತ ಕಲ್ಲುಗುಂಡಿ ಚರ್ಚ್ ಬಳಿ ಹೊಟೇಲ್ ಬದಿಯಲ್ಲಿ ಪಾನ್ ಬೀಡ ಅಂಗಡಿ ನಡೆಸುತ್ತಿದ್ದು ಈತ ವ್ಯಕ್ತಿಯು ಜನರಿಂದ ಹಣವನ್ನು ಪಣವಾಗಿರಿಸಿಕೊಂಡು ಮಟ್ಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕನಾದ ಸಂತೋಷ್ ಬಿ ಪಿ ರವರಿಗೆ ದಿನಾಂಕ:20.01.2025 ರಂದು ರಾತ್ರಿ ಮಾಹಿತಿ ಬಂದಿದ್ದು, ಮಾಹಿತಿ ಆಧಾರದ ಮೇಲೆ ದಾಳಿ  ಮಾಡಿದ್ದಾರೆ. ಅದರಂತೆ  ಪಾನ್ ಬೀಡ ಅಂಗಡಿಯಲ್ಲಿದ್ದ ಮಹಮ್ಮದ್ ಮುಸ್ತಕ್ ನನ್ನು ಕೂಲಂಕೂಷವಾಗಿ ವಿಚಾರಿಸಿದಾಗ ತಾನು ಗಿರಾಕಿಗಳಿಂದ ಹಣವನ್ನು ಪಡೆದು ಮಟ್ಕಾ ಜೂಜಾಟ ನಡೆಸುತ್ತಿರುವ ಬಗ್ಗೆ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಬಳಿಕ ತಪಾಸಣೆ ನಡೆಸಿ, ಆರೋಪಿಯ ಬಳಿಯಿದ್ದ ಮಟ್ಕಾ ಜೂಜಾಟ ನಡೆಸಿ ಸಂಗ್ರಹಿಸಿದ ರೂ  1650/- ನಗದು, ಮಟ್ಕಾ ಆಡಲು ಬಳಸಿದ ಪುಸ್ತಕ-01 ಪುಸ್ತಕದಲ್ಲಿ ಅಂಕೆ ಸಂಖ್ಯೆಗಳನ್ನು ಬರೆಯಲು ಬಳಸಿರುವ ಪೆನ್-01 ನ್ನು ಸ್ವಾದೀನಪಡಿಸಿಕೊಂಡು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

- Advertisement -

Latest News

error: Content is protected !!