Wednesday, June 24, 2026
Homeತಾಜಾ ಸುದ್ದಿಅ.24ರಂದು ಮಧ್ಯಾಹ್ನ 12ಗಂಟೆಗೆ ತೆರೆಯಲಿದೆ ಹಾಸನಾಂಬ ದೇವಾಲಯದ ಬಾಗಿಲು

ಅ.24ರಂದು ಮಧ್ಯಾಹ್ನ 12ಗಂಟೆಗೆ ತೆರೆಯಲಿದೆ ಹಾಸನಾಂಬ ದೇವಾಲಯದ ಬಾಗಿಲು

- Advertisement -
- Advertisement -

ಹಾಸನ; ರಾಜ್ಯದ ಪ್ರಸಿದ್ಧ  ಹಾಸನಾಂಬ ದೇಗುಲದ ಬಾಗಿಲು ಅಕ್ಟೋಬರ್.24ರಂದು ಮಧ್ಯಾಹ್ನ 12ಗಂಟೆಗೆ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಅವರು, ಹಾಸನಾಂಬ ದೇವಾಲಯವು ಅಕ್ಟೋಬರ್.24ರಂದು ಮಧ್ಯಾಹ್ನ 12 ಗಂಟೆಗೆ ಬಾಗಿಲು ತೆರೆಯಲಿದೆ. ಆದರೇ ಮೊದಲ ದಿನವಾದಂತ ಅಂದು ಭಕ್ತರಿಗೆ ಹಾಸನಾಂಬ ದರ್ಶನಕ್ಕೆ ಅವಕಾಶವಿಲ್ಲ ಎಂದರು.

ಮೊದಲ ಮತ್ತು ಕೊನೆಯ ದಿನದಂದು ಹಾಸನಾಂಬ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶವಿರುವುದಿಲ್ಲ. ಅಕ್ಟೋಬರ್.25ರಿಂದ 11 ದಿನಗಳ ಕಾಲ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ದೇವಿಯ ದರ್ಶನಕ್ಕೆ ಟಿಕೆಟ್ ಖರೀದಿಸಿಯೂ ಭಕ್ತರು ದರ್ಶನ ಮಾಡಬಹುದಾಗಿದೆ. 1000 ಹಾಗೂ 300 ರೂ ಟಿಕೆಟ್ ಖರೀದಿಸಿದವರಿಗೆ ಒಂದೊಂದು ಲಾಡು, ಪ್ರಸಾದವನ್ನು ವಿತರಿಸುವುದಾಗಿ ಹೇಳಿದ್ದಾರೆ.

ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೆ ಎಸ್ ಆರ್ ಟಿಸಿಯಿಂದ ಟೂರ್ ಪ್ಯಾಕೇಜ್ ಕೂಡ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.

- Advertisement -

Latest News

error: Content is protected !!