Wednesday, June 3, 2026
Homeಕರಾವಳಿಉಡುಪಿಬ್ರಹ್ಮಾವರ: ನಾಯಿ ಅಡ್ಡ ಬಂದು ಮರಕ್ಕೆ ಡಿಕ್ಕಿ ಹೊಡೆದ ರಿಕ್ಷಾ: ಗಂಭೀರ ಗಾಯಗೊಂಡ ಆಟೋ ಚಾಲಕ...

ಬ್ರಹ್ಮಾವರ: ನಾಯಿ ಅಡ್ಡ ಬಂದು ಮರಕ್ಕೆ ಡಿಕ್ಕಿ ಹೊಡೆದ ರಿಕ್ಷಾ: ಗಂಭೀರ ಗಾಯಗೊಂಡ ಆಟೋ ಚಾಲಕ ಸಾವು

- Advertisement -
- Advertisement -

ಬ್ರಹ್ಮಾವರ: ನಾಯಿಯೊಂದು ಅಡ್ಡ ಬಂದು ಆಟೋ ರಿಕ್ಷಾ ಮರಕ್ಕೆ ಡಿಕ್ಕಿ ಹೊಡೆದ ಘಟನೆ  ಉಪ್ಪೂರು ಗ್ರಾಮದ ಅಮ್ಮುಂಜೆ  ರೈಲ್ವೆ ಓವರ್ ಬ್ರಿಡ್ಜ್ ಸಮೀಪ ನಡೆದಿದೆ.

ರಿಕ್ಷಾ ಹಾವಂಜೆ ಕಡೆ ತೆರಳುತ್ತಿದ್ದಾಗ ನಾಯಿಯೊಂದು ಅಡ್ಡ ಬಂದಿದೆ. ಅದನ್ನ ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಆಟೋ ಚಾಲಕ ಗಣೇಶ್‌ ಪೂಜಾರಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ರಿಕ್ಷಾ ಚಾಲಕನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!