Saturday, June 6, 2026
Homeಕರಾವಳಿಮಂಗಳೂರು: ರೈಲು ಡಿಕ್ಕಿಹೊಡೆದು ಅಪರಿಚಿತ ವ್ಯಕ್ತಿ ಸಾವು

ಮಂಗಳೂರು: ರೈಲು ಡಿಕ್ಕಿಹೊಡೆದು ಅಪರಿಚಿತ ವ್ಯಕ್ತಿ ಸಾವು

- Advertisement -
- Advertisement -

ಮಂಗಳೂರು: ರೈಲು ಡಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬಂಟ್ವಾಳ ಮತ್ತು ಪಡೀಲ್ ರೈಲು ನಿಲ್ದಾಣಗಳ ನಡುವೆ ಶುಕ್ರವಾರ ನಡೆದಿದೆ.

ಮೃತ ವ್ಯಕ್ತಿ ಗಡ್ಡ, ಮೀಸೆ ಬಿಟ್ಟಿದ್ದು, ದುಂಡು ಮುಖ, ತಲೆಯಲ್ಲಿ ಒಂದು ಇಂಚು ಉದ್ದದ ಕೂದಲುಗಳು, ಕಂದು, ನೀಲಿ ಮತ್ತು ಬಿಳಿ ಉದ್ದ ಗೆರೆಗಳಿರುವ ಶರ್ಟ್ ಧರಿಸಿದ್ದು, ಕಪ್ಪು ಜೀನ್ಸ್ ಮತ್ತು ಕಂದು ಬಣ್ಣದ ಬರ್ಮುಡ ಧರಿಸಿರುತ್ತಾನೆ.

ಸೊಂಟದಲ್ಲಿ ಉಡುದಾರವಿದ್ದು ಅದರಲ್ಲಿ ಎರಡು ಕೀ ಗಳಿವೆ. ಎಡ ಕಾಲಿನಲ್ಲಿ ದಾರ ಮತ್ತು ಕೊರಳಿನಲ್ಲಿ ಕಪ್ಪು ಮತ್ತು ಬಿಳಿ ಮಣಿ ಇರುವ ಸರ ಧರಿಸಿರುತ್ತಾನೆ.

ಈ ಚಹರೆಯ ವ್ಯಕ್ತಿಯ ಕುರಿತು ತಿಳಿದು ಬಂದಲ್ಲಿ ಮಂಗಳೂರು ರೈಲ್ವೆ ಪೊಲೀಸರು ಸಂಪರ್ಕಿಸಲು ಕೋರಿದ್ದಾರೆ.

- Advertisement -

Latest News

error: Content is protected !!