Saturday, May 18, 2024
Homeಕರಾವಳಿಸುಳ್ಯ: ದನ ಸಾಗಾಟ ನಡೆಸಿದ ಆರೋಪಿಗಳನ್ನು ದೋಷಮುಕ್ತಗೊಳಿಸಿ ಆದೇಶ ನೀಡಿದ ನ್ಯಾಯಾಲಯ !

ಸುಳ್ಯ: ದನ ಸಾಗಾಟ ನಡೆಸಿದ ಆರೋಪಿಗಳನ್ನು ದೋಷಮುಕ್ತಗೊಳಿಸಿ ಆದೇಶ ನೀಡಿದ ನ್ಯಾಯಾಲಯ !

spot_img
- Advertisement -
- Advertisement -

ಸುಳ್ಯ: ನ್ಯಾಯಾಲಯವು, ದನ ಸಾಗಾಟ ನಡೆಸಿದ ಆರೋಪಿಗಳನ್ನು ದೋಷಮುಕ್ತಗೊಳಿಸಿ ಆದೇಶ ನೀಡಿದೆ.

10 ದನ ಮತ್ತು 2 ಕರುಗಳನ್ನು ಆರೋಪಿಗಳಾದ ಅಬ್ದುಲ್ ಖಾದರ್, ಸುಬೀರ್ ಪಿ. ಸಿ ಹಾಗೂ ಮನೀಶ್.ವಿ ರವರುಗಳು ಕದ್ದು ಅವುಗಳನ್ನು ಲಾರಿಯಲ್ಲಿ ಹಾಕಿ ಜೊತೆಗೆ ಲಾರಿಯ ನೋಂದಣಿ ಸಂಖ್ಯೆಯನ್ನು ಬದಲಿಸಿ ಅವುಗಳ ಕೈ ಕಾಲುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಿ ಸಾಗಾಟ ಮಾಡಲು 2016 ರ ಡಿ.27 ರಂದು ಸಂಜೆ ಬೆಳ್ಳಾರೆಯಿಂದ ಯತ್ನಿಸಿದ ಆರೋಪದ ಮೇಲೆ ಬೆಳ್ಳಾರೆ ಪೊಲೀಸರು ಪ್ರಕರಣದಾಖಲಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿ ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಬಳಿಕ ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಕಿರಿಯ ಸಿವಿಲ್ ಹಾಗೂ ಜೆ. ಯಮ್. ಎಫ್. ಸಿ ನ್ಯಾಯಾಲಯ ಸುಳ್ಯ ಇದರ ನ್ಯಾಯಾಧೀಶರಾದ ಯಶವಂತ್ ಕುಮಾರ್ ರವರು ಈ ಪ್ರಕರಣವನ್ನು ತನಿಖೆಗೆತ್ತಿಕೊಂಡ ಆರೋಪಿಗಳ ವಿರುದ್ದ ಆರೋಪವನ್ನು ಸಾಬೀತುಪಡಿಸಲು ಅಭಿಯೋಜನೆ ವಿಫಲವಾಗಿದೆ ಎಂಬ ಕಾರಣವನ್ನು ನೀಡಿ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.

ಆರೋಪಿಗಳ ಪರವಾಗಿ ಸುಳ್ಯದ ನ್ಯಾಯವಾದಿಗಳಾದ ಯಂ. ವೆಂಕಪ್ಪ ಗೌಡ,ಚಂಪಾ ವಿ. ಗೌಡ, ರಾಜೇಶ್ ಬಿ.ಜಿ., ಶ್ಯಾಮ್ ಪ್ರಸಾದ್ ಹಾಗೂ ಮನೋಜ್ ರವರು ವಕಾಲತ್ತು ವಹಿಸಿದ್ದರು .

- Advertisement -
spot_img

Latest News

error: Content is protected !!