Friday, October 4, 2024
Homeಕರಾವಳಿಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿ; ‘ಯಾವ ಕರ್ಮ’ದಿಂದ ಉತ್ತಮ ರಸ್ತೆ ಮಾಡಲು ಸಾಧ್ಯವಾಗಿಲ್ಲ ಎಂದು...

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿ; ‘ಯಾವ ಕರ್ಮ’ದಿಂದ ಉತ್ತಮ ರಸ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ನನಗೆ ಅರ್ಥವಾಗ್ತಿಲ್ಲ; ಜನಪ್ರತಿನಿಧಿಗಳ ಬಗ್ಗೆ ಚೌಟ ಬೇಸರ

spot_img
- Advertisement -
- Advertisement -

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ತುಳುನಾಡಿನ ಅಸ್ಟಮಿ ಐಸಿರ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಬ್ರಿಜೇಶ್ ಚೌಟ, ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದರು.

ಮಂಗಳೂರಿನಿಂದ ಬೆಂಗಳೂರು ಹೋಗುವ ರಸ್ತೆಯನ್ನು ನೋಡಿದರೆ ಅದರಲ್ಲಿ ಯಾವಾ ಮುಚ್ಚುಮರೆಯೂ ಇಲ್ಲ. ಜನಪ್ರತಿನಿಧಿಗಳು ಅಂದಾಗ ಸತ್ಯ ಹೇಳಲು ಕಷ್ಟ ಆಗುತ್ತದೆ. ಆದರೆ ತುಳುನಾಡಿನ ಹುಡುಗನಾಗಿ ಒಂದು ಮಾತನ್ನು ಹೇಳಲು ಇಷ್ಟಪಡೇನೆ. ಅದ್ಯಾಕೆ ಯಾವಾ ಕರ್ಮದಿಂದ ಮಂಗಳೂರು ಬೆಂಗಳೂರಿಗೆ ಒಂದು ಉತ್ತಮ ರಸ್ತೆ ಮಾಡಲು ಸಾಧ್ಯವಾಗಿಲ್ಲ ಅಂತ ನನಗೆ ಗೊತ್ತಾಗ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ಬಹಳಷ್ಟು ಸಂಖ್ಯೆಯಲ್ಲಿ ತುಳುವಪ್ಪೆಯ ಮಕ್ಕಳು ಬೆಂಗಳೂರಿನಲ್ಲಿ ದುಡಿಯುತ್ತಿದ್ದಾರೆ. ಮಂಗಳೂರಿನಿಂದ ಬೆಂಗಳೂರಿಗೆ ಹೋಗಲು ಒಂದು ಉತ್ತಮ ರಸ್ತೆ ಕೊಡಲು ಸಾಧ್ಯವಾಗಿಲ್ಲಂದರೆ ಜನಪ್ರತಿನಿಧಿಗಳಾದ ನಾವು ನಮಗೆ ಸಿಕ್ಕಿದ ಜವಾಬ್ದಾರಿಯಲ್ಲೇ ವಿಫಲವಾಗಿದ್ದೇವೆ. ಇನ್ನು ಮುಂದೆ ನನ್ನ ಮೊದಲ ಆದ್ಯತೆ ಖಾದರ್ ಸಾಹೇಬರ, ರಾಜ್ಯ ಸರ್ಕಾರದ, ಕೇಂದ್ರ ಸರ್ಕಾರದ ಸಹಕಾರ ತೆಗೆದುಕೊಂಡು ಮಂಗಳೂರಿನಿಂದ ಬೆಂಗಳೂರಿಗೆ ನನ್ನ ವ್ಯಾಪ್ತಿಯೊಳಗೆ ಒಂದು ಉತ್ತಮ ರಸ್ತೆ ನಿರ್ಮಿಸುವುದು ಎಂದರು.

ನಮ್ಮ ತುಳುನಾಡು ದೈವ ದೇವರ ನಾಡು. ನಾವೆಲ್ಲ ಒಟ್ಟಾಗಿ ಇರುವ ಜಾಗ ಅಂದರೆ ತುಳುನಾಡು. ಯಾರೋ ದೆಹಲಿಯಲ್ಲಿ ಕುಳಿತು ನಮ್ಮ ತುಳುನಾಡಿನ ಬಗ್ಗೆ ಕೋಮು ಸೂಕ್ಷ್ಮ ಪ್ರದೇಶ ಎಂದು ಹೇಳಬೇಕಾದಂತಹ ಅವಶ್ಯಕತೆಯಿಲ್ಲ. ತುಳುನಾಡು ಎಂದರೆ ಎಲ್ಲರೂ ಒಟ್ಟಾಗಿರುವ ಶ್ರೇಷ್ಠ ಭೂಮಿ ಎಂದು ಗಟ್ಟಿ ಧ್ವನಿಯಲ್ಲಿ ಹೇಳಬೇಕು ಎಂದರು.

‘ಐಸಿರ’ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ ಖಾದರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಉದ್ಯಮಿ ಬಂಜಾರ ಪ್ರಕಾಶ್ ಶೆಟ್ಟಿ, ಬಿಂದು ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಸತ್ಯಶಂಕರ್ ಭಟ್, ನಟ ನಿರ್ದೇಶಕ ರಾಜ್ ಬಿ.ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!