Sunday, June 7, 2026
HomeUncategorizedಬಂಟ್ವಾಳ:  ಮಹಿಳೆ ತವರು ಮನೆಗೆ ಹೋಗಿದ್ದಾಗ ಮನೆಗೆ ನುಗ್ಗಿ ಕಳ್ಳತನ

ಬಂಟ್ವಾಳ:  ಮಹಿಳೆ ತವರು ಮನೆಗೆ ಹೋಗಿದ್ದಾಗ ಮನೆಗೆ ನುಗ್ಗಿ ಕಳ್ಳತನ

- Advertisement -
- Advertisement -

ಬಂಟ್ವಾಳ:  ಮಹಿಳೆಯೊಬ್ಬರು ತವರು ಮನೆಗೆ ಹೋಗಿದ್ದಾಗ ಮನೆಗೆ ನುಗ್ಗಿ ಕಳ್ಳರು ಕಳ್ಳತನ ಮಾಡಿರುವ ಘಟನೆ ಬಂಟ್ವಾಳದ ಸಜೀಪಮುನ್ನುರು ಎಂಬಲ್ಲಿ ಸೆ.23 ರಂದು ಸಂಜೆ ಬೆಳಕಿಗೆ ಬಂದಿದೆ.

ಸಜೀಪಮುನ್ನುರು ಗ್ರಾಮದ ನಿವಾಸಿಯಾಗಿರುವ ಜಯಲಕ್ಷ್ಮಿ ಅವರು ಸೆ.7 ರಂದು ಮನೆಗೆ ಬೀಗ ಹಾಕಿ ಪುತ್ತೂರು ಸಂಟ್ಯಾರ್ ಕೈಕಾರ್ ನಲ್ಲಿರುವ ತನ್ನ ತಾಯಿ ಮನೆಗೆ ತೆರಳಿದ್ದರು. ಸೆಪ್ಟೆಂಬರ್ 23ರ ಸಂಜೆ ಮನೆಗೆ ವಾಪಾಸ್ ಬಂದಾಗ, ಮನೆಯ ಬಾಗಿಲಿನ ಡೋರ್ ಲಾಕ್ ಮುರಿದಿತ್ತು, ಕಿಟಕಿಯ ಸರಳನ್ನು ಬಗ್ಗಿಸಿ ಯಾರೋ ಕಳ್ಳರು ಒಳಗೆ ನುಗ್ಗಿರುವುದು ಬೆಳಕಿಗೆ ಬಂದಿದೆ, ಬಳಿಕ ಮನೆಯೊಳಗೆ ಹೋಗಿ ನೋಡಿದಾಗ ಗೋಡ್ರೇಜ್ ಮತ್ತು ಬೆಡ್ ರೂಂ ನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಬಿದ್ದಿರುವುದು ಕಂಡುಬಂದಿದೆ, ಅಲ್ಲದೆ ಗೋಡ್ರೇಜ್ ನಲ್ಲಿ ಇಟ್ಟಿದ್ದ ಸುಮಾರು 2 ½ ಪವನ್ ತೂಕದ 2 ಚಿನ್ನದ ಬಳೆಗಳು ಮತ್ತು 25000/- ನಗದನ್ನು ಕಳ್ಳರು ಕದ್ದಿರೋದು ಗೊತ್ತಾಗಿದೆ. ಕಳುವಾದ ಸೊತ್ತುಗಳ ಒಟ್ಟು ಮೌಲ್ಯ 1,25,000 ಅಂದಾಜಿಸಲಾಗಿದೆ.

ಘಟನೆಗೆ ಸಂಬಂಧಿಸಿ ಮಹಿಳೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!