- Advertisement -
- Advertisement -
ಬೆಳ್ತಂಗಡಿ: ಬೆಳ್ತಂಗಡಿಯ ಪ್ರಸಿದ್ದ ಉದ್ಯಮಿ, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ಸೀನಿಯರ್ ಜೆಸಿ ಪೂರ್ವಾಧ್ಯಕ್ಷ ಪೃಥ್ವಿ ರಂಜನ್ ರಾವ್ (74) ಹೃದಯಾಘಾತದಿಂದ ಸೆ.24 ರಂದು (ಇಂದು) ವಿಧಿವಶರಾಗಿದ್ದಾರೆ.
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಇವರು ಸಾಧು ಹಾಗೂ ಮೃದು ಸ್ವಭಾವದ ವ್ಯಕ್ತಿತ್ವವನ್ನು ಹೊಂದಿದ್ದರು. ಇವರು ಬೆಳ್ತಂಗಡಿಯ ಬಸ್ ನಿಲ್ದಾಣ ಬಳಿ ಪೃಥ್ವಿ ಕಾಂಪ್ಲೆಕ್ಸ್ ನ್ನು ಹೊಂದಿದ್ದು, ಮೈತ್ರಿ ಎಂಟರ್ಪ್ರೈಸಸ್ ಎಂಬ ಸಂಸ್ಥೆಯ ಮಾಲೀಕರಾಗಿದ್ದರು.ಮೃತರು ಪತ್ನಿ ನಿವೃತ್ತ ಶಿಕ್ಷಕಿ ಶ್ರೀಮತಿ ಉಮಾ ರಾವ್, ಇಬ್ಬರು ಪುತ್ರರಾದ ರಾಹುಲ್ ರಾವ್, ರತೀಶ್ ರಾವ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ
- Advertisement -