Friday, October 4, 2024
Homeಕರಾವಳಿಬೆಳ್ತಂಗಡಿ; ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರ ಕಾಳಿಬೆಟ್ಟದಲ್ಲಿ ನವರಾತ್ರಿ ಉತ್ಸವ

ಬೆಳ್ತಂಗಡಿ; ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರ ಕಾಳಿಬೆಟ್ಟದಲ್ಲಿ ನವರಾತ್ರಿ ಉತ್ಸವ

spot_img
- Advertisement -
- Advertisement -

ಬೆಳ್ತಂಗಡಿ; ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರ ಕಾಳಿಬೆಟ್ಟುವಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನವರಾತ್ರಿ ಉತ್ಸವ ವು ಇದೇ ಬರುವ ತಾ.03/10/2024 ನೇ ಗುರುವಾರದಿಂದ 12/10/2024ನೇ ಶನಿವಾರದವರೆಗೆ ನಡೆಯಲಿದೆ. ನವರಾತ್ರಿ ಉತ್ಸವದ ಪ್ರತಿದಿನ ಶ್ರೀ ಕ್ಷೇತ್ರದಲ್ಲಿ ಚಂಡಿಕಾಹೋಮ, ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು,  ತಾ. 12/10/2024, ಶನಿವಾರ ಸಾರ್ವಜನಿಕ ಚಂಡಿಕಾಹೋಮ ಮತ್ತು ಅನ್ನಸಂತರ್ಪಣೆ ನಡೆಯಲಿರುವುದು.ತಾ. 09/10/2024, ಬುಧವಾರ ದಂದು ಶ್ರೀ ಶಾರದ ಪೂಜೆ ನಡೆಯಲಿರುವುದು.

 ತಾ. 09/10/2024, ಬುಧವಾರದಿಂದ 11/10/2024, ಶುಕ್ರವಾರದವರೆಗೆ ಅಕ್ಷರಭ್ಯಾಸ ( ಬೆಳಿಗ್ಗೆ 09.00 ರಿಂದ  11.00 ಗಂಟೆಯ ವರೆಗೆ ) ನಡೆಯಲಿರುವುದು.

ತಾ. 10/10/2024, ಗುರುವಾರ ದಂದು  ಬೆಳಗ್ಗೆ 09:00 ಗಂಟೆಗೆ ಶ್ರೀ ಕಾಳಿಗುಡಿಯಲ್ಲಿ ತೆನೆ ಪೂಜೆ, ಮಧ್ಯಾಹ್ನ ವಿಶೇಷ ಪೂಜೆ ಹಾಗೂ ರಾತ್ರಿ ಹೂವಿನ ಪೂಜೆ, ಅಷ್ಟಾವದಾನ, ರಂಗಪೂಜೆ, ವಾಹನ ಪೂಜೆ ಜರಗಲಿರುವುದು.

ತಾ. 11/10/2024, ಶುಕ್ರವಾರದಂದು ಸಂಜೆ 05:00 ಗಂಟೆಯಿಂದ ವಾಹನ ಪೂಜೆ, ಶ್ರೀ ಮೂಲದುರ್ಗಾ ದೇವಿಗೆ  ರಾತ್ರಿ ಹೂವಿನ ಪೂಜೆ, ರಂಗ ಪೂಜೆ ನಡೆಯಲಿದೆ.ರಾತ್ರಿ ಫಲಾಹಾರದ ವ್ಯವಸ್ಥೆ ಇರುತ್ತದೆ.

ತಾ. 12/10/2024, ಶನಿವಾರ ಸಾರ್ವಜನಿಕ ಚಂಡಿಕಾಹೋಮ ಮತ್ತು ಅನ್ನಸಂತರ್ಪಣೆ ನಡೆಯಲಿರುವುದು.ಶ್ರೀ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಭಾಗವಹಿಸಿ, ಶ್ರೀ ದುರ್ಗಾಕಾಳಿಕಾಂಬ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿ.                  

ವಿಶೇಷ ಸೂಚನೆ:

1. ಸಾರ್ವಜನಿಕ ಚಂಡಿಕಾಹೋಮ (₹500/- ಮಾತ್ರ) ಮಾಡಲಿಚ್ಛಿಸುವವರು ತಾ. 12/10/2024ರ ಬೆಳಗ್ಗೆ 11:00 ಗಂಟೆಯ ಒಳಗೆ ತಮ್ಮ ಹೆಸರನ್ನು ಕಚೇರಿಯಲ್ಲಿ ನೊಂದಾಯಿಸುವುದು.

2. ನವರಾತ್ರಿಯ ದಿನ ವಿಶೇಷ ರಂಗಪೂಜೆ (₹1,500/-) ಮಾಡಿಸುವವರು ಮುಂಚಿತವಾಗಿ ಕಚೇರಿಯಲ್ಲಿ ತಿಳಿಯತಕ್ಕದ್ದು. 

ಸಾರ್ವಜನಿಕ ರಂಗಪೂಜೆ (₹1,000/-)

4. ನವರಾತ್ರಿಯ ದಿನ ದೇವಿ ಪಾರಾಯಣ (₹1,000/-) ಮಾಡಿಸುವವರು ಕ್ಷೇತ್ರದ ಕಚೇರಿಯಲ್ಲಿ ರಶೀದಿಯನ್ನು ಪಡೆಯಬೇಕಾಗಿ ವಿನಂತಿ.

ಶ್ರೀ ಕ್ಷೇತ್ರದ ಸಂಸ್ಥಾಪಕರು, ಆಡಳಿತ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ಅರ್ಚಕ ವೃಂದ ಮತ್ತು ಸಿಬ್ಬಂದಿ ವರ್ಗ, ಶ್ರೀ ಕ್ಷೇತ್ರ ಸವಣಾಲು.

- Advertisement -
spot_img

Latest News

error: Content is protected !!