Saturday, June 6, 2026
Homeತಾಜಾ ಸುದ್ದಿ ಪರೇಶ್‌ ಮೇಸ್ತಾ ಪ್ರಕರಣದ ಮರು ತನಿಖೆ ನಡೆಸುವ ಬಗ್ಗೆ ಸಿಎಂ ಭರವಸೆ: ಕೋಟಾ ಶ್ರೀನಿವಾಸ ಪೂಜಾರಿ

 ಪರೇಶ್‌ ಮೇಸ್ತಾ ಪ್ರಕರಣದ ಮರು ತನಿಖೆ ನಡೆಸುವ ಬಗ್ಗೆ ಸಿಎಂ ಭರವಸೆ: ಕೋಟಾ ಶ್ರೀನಿವಾಸ ಪೂಜಾರಿ

- Advertisement -
- Advertisement -

ಕಾರವಾರ: ಪರೇಶ್‌ ಮೇಸ್ತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ತನ್ನ ಮಗನ ಸಾವು ಸಹಜ ಸಾವಲ್ಲ ಸಿಬಿಐ ಮರುತನಿಖೆ ನಡೆಸುವಂತೆ ಪರೇಶ್‌ ಮೇಸ್ತಾ ತಂದೆ ಕಮಲಾಕರ್‌ ಮೇಸ್ತಾ ಸಿಎಂ ಬಳಿ ಮನವಿ ಸಲ್ಲಿಸಿದ್ರು. ಈ ಬಗ್ಗೆ ಪ್ರತಿಕ್ರಯಿಸಿದ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿ, ಸಿಎಂ ಮರುಶೀಲನೆ ನಡೆಸುವ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಕಾರವಾರದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕಮಲಾಕರ ಮೇಸ್ತಾ ಅವರು ಮುಖ್ಯಮಂತ್ರಿ ಭೇಟಿ ಮಾಡಿ ಈಗಿನ ಸಿಬಿಐ ತನಿಖೆ ಸಮರ್ಪಕವಾಗಿಲ್ಲ ಎಂದು ಮರು ತನಿಖೆಗೆ ಆಗ್ರಹಿಸಿದ್ದಾರೆ. ಪರೇಶ್ ಮೇಸ್ತಾ ಕುಟುಂಬದ ಪರವಾಗಿ ನಮ್ಮ ಸರ್ಕಾರ ಇದೆ. ಶೀಘ್ರದಲ್ಲೇ ಮೇಸ್ತಾ ಪ್ರಕರಣ ಮರು ತನಿಖೆಗೆ ನಡೆಸಲಾಗುವುದು ಎಂದು ಹೇಳಿದ್ದಾರೆ.

- Advertisement -

Latest News

error: Content is protected !!