Thursday, June 4, 2026
Homeಕರಾವಳಿಕಡಬ; ಸೇತುವೆ ಮೇಲೆ ಜೆಸಿಬಿ ಸಂಚರಿಸುವಾಗ ಮುರಿದು ಬಿದ್ದ ಸೇತುವೆ

ಕಡಬ; ಸೇತುವೆ ಮೇಲೆ ಜೆಸಿಬಿ ಸಂಚರಿಸುವಾಗ ಮುರಿದು ಬಿದ್ದ ಸೇತುವೆ

- Advertisement -
- Advertisement -

ಕಡಬ; ಸೇತುವೆ ಮೇಲೆ ಜೆಸಿಬಿ ಸಂಚರಿಸುವಾಗ ಸೇತುವೆ ಮುರಿದು ಬಿದ್ದ ಘಟನೆ ಕಡಬ ಸಮೀಪದ ಕೊಂಬಾರಿನಲ್ಲಿ ನಡೆದಿದೆ.

ಕಡಬ  ತಾಲೂಕಿನ ಕೊಂಬಾರು ಗ್ರಾಮದಿಂದ ಕೆಂಜಳಕ್ಕೆ ಸಂಪರ್ಕಿಸುವ  ಜಿಲ್ಲಾ ಪಂಚಾಯತ್  ಪ್ರಮುಖ ರಸ್ತೆ ಇದಾಗಿದೆ. ಹಳೆ ಸೇತುವೆ ಇದಾಗಿದ್ದು ಈ ಹಿಂದೆ ಜೆಸಿಬಿ ಹೋದ ಹಿನ್ನೆಲೆಯಲ್ಲಿ ಕಿರು ಸೇತುವೆ ಮುರಿದು ಬಿದ್ದಿತ್ತು.  ಬಳಿಕ ಗ್ರಾಮಸ್ಥರೇ ಕಬ್ಬಿಣದ ಶೀಟ್,ಮರದ ಹಲಗೆ ಬಳಸಿ ಲಘು ವಾಹನ ಸಂಚರಿಸುವಂತೆ ಮಾಡಿದ್ದರು.  ಇದೀಗ ಮತ್ತೆ ಗ್ರಾ.ಪಂ ನಿಂದ ನೀರು ಸರಬರಾಜು ಮಾಡಲು ಪೈಪ್ ಲೈನ್ ಅಗೆಯುತ್ತಿದ್ದ ವೇಳೆ   ಜೆಸಿಬಿ ಹಾದು ಹೋದ ಕಾರಣ ಸೇತುವೆ ಬಹುತೇಕ ಕುಸಿದು ಬಿದ್ದಿದೆ.

ಹಳೆ  ಕಿರು ಸೇತುವೆ ಮುರಿದು ಬಿದ್ದ ಕಾರಣ  ಸೇತುವೆ ಪಕ್ಕದಲ್ಲಿಯೇ  ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ತಾತ್ಕಾಲಿಕ  ರಸ್ತೆ  ನಿರ್ಮಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ .   ಹಲವಾರು ವರ್ಷಗಳಿಂದ ಕಿರು ಸೇತುವೆ ನಿರ್ಮಿಸುವಂತೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ  ಪ್ರಯೋಜನವಾಗಿಲ್ಲ  ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.

.

- Advertisement -

Latest News

error: Content is protected !!