Saturday, June 6, 2026
Homeತಾಜಾ ಸುದ್ದಿಡಿಜೆ ಶಬ್ದಕ್ಕೆ ಹೃದಯಾಘಾತವಾಗಿ ವರ ಮಂಟಪದಲ್ಲೇ ಸಾವು

ಡಿಜೆ ಶಬ್ದಕ್ಕೆ ಹೃದಯಾಘಾತವಾಗಿ ವರ ಮಂಟಪದಲ್ಲೇ ಸಾವು

- Advertisement -
- Advertisement -

ಬಿಹಾರ; ಕಿವಿಗಪ್ಪಳಿಸುವ ಡಿಜೆ ಸದ್ದಿಗೆ ಹೃದಯಾಘಾತವಾಗಿ ವರ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದಿದೆ.

ಸುರೇಂದ್ರಕುಮಾರ್ ಮೃತ ವರ. ಸುರೇಂದ್ರಕುಮಾರ್ ಮಂಟಪದಲ್ಲಿ ಹಾರ ಬದಲಾಯಿಸಿಕೊಳ್ಳುವ ವೇಳೆ ಜೋರಾಗಿ ಡಿಜೆ ಶಬ್ದ ಹಾಕಿದ್ದಾರೆ.ನನಗೆ ಕೇಳಲು ಆಗುತ್ತಿಲ್ಲ. ಕೂಡಲೇ ಡಿಜೆ ಶಬ್ದವನ್ನು ಕಡಿಮೆ ಮಾಡಿ ಎಂದು ಸುರೇಂದ್ರಕುಮಾರ್‍ ಹೇಳಿದ್ದಾರೆ. ಆದರೆ ಡಿಜೆ ಶಬ್ದವನ್ನು ಕಡಿಮೆ ಮಾಡಿರಲಿಲ್ಲ. ಅತಿಯಾದ ಶಬ್ದದಿಂದಾಗಿ ಮಂಟಪದಲ್ಲಿ ವಧುವಿನ ಎದುರಲ್ಲೇ ವರ ಕುಸಿದು ಬಿದ್ದಿದ್ದಾರೆ.

ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಆದರೆ ಈ ವೇಳೆ ಅವರು ಮೃತಪಟ್ಟಿದ್ದರು.

- Advertisement -

Latest News

error: Content is protected !!