Sunday, June 7, 2026
Homeಕರಾವಳಿಶಿರ್ವ : ನೀರುಪಾಲಾಗಿದ್ದ ದೈವ ನರ್ತಕನ ಮೃತದೇಹ ಪತ್ತೆ !

ಶಿರ್ವ : ನೀರುಪಾಲಾಗಿದ್ದ ದೈವ ನರ್ತಕನ ಮೃತದೇಹ ಪತ್ತೆ !

- Advertisement -
- Advertisement -

ಶಿರ್ವ: ನಡಿಬೆಟ್ಟು ಆಣೆಕಟ್ಟು ಬಳಿ ರವಿವಾರ ಸಂಜೆ ಗಾಳ ಹಾಕಿ ಮೀನು ಹಿಡಿಯಲು ಹೋಗಿ ಆಕಸ್ಮಾತ್ತಾಗಿ ಜಾರಿಬಿದ್ದು ನೀರು ಪಾಲಾದ ಮಟ್ಟಾರು ನಿವಾಸಿ ದಿಲೀಪ್ (30) ಅವರ ಶವ ಆಣೆಕಟ್ಟು ಬಳಿ ಪತ್ತೆಯಾಗಿದೆ.

ಹೊಳೆಯಲ್ಲಿ ಮೀನಿಗೆ ಗಾಳ ಹಾಕಲು ಹೋಗಿದ್ದ ದಿಲೀಪ್ ಆಕಸ್ಮಿಕವಾಗಿ ಕಾಲು ಜಾರಿ ನೀರುಪಾಲಾಗಿದ್ದರು .ಚಿಕ್ಕ ವಯಸ್ಸಿನಲ್ಲೇ ಕರಾವಳಿಯಾದ್ಯಂತ ದೈವಸ್ಥಾನಗಳಲ್ಲಿ ದೈವ ನರ್ತಕರಾಗಿ,ಸೇವಕರಾಗಿ ಪ್ರಸಿದ್ದಿಯನ್ನು ಪಡೆದಿದ್ದು, ಬಬ್ಬು ಸ್ವಾಮಿ ದೈವದ ನರ್ತಕರಾಗಿ ಅತೀ ಹೆಚ್ಚು ಪ್ರಸಿದ್ದಿಗಳಿಸಿದ್ದರು.

ಉಡುಪಿ ಅಗ್ನಿಶಾಮಕ ದಳದ ಠಾಣಾಧಿಕಾರಿ ಸತೀಶ್.ಏನ್ ನೇತೃತ್ವದಲ್ಲಿ ಗ್ರೂಪ್ ಲೀಡರ್ ಸತೀಶ್ ಮತ್ತು ಸಿಬ್ಬಂದಿ ಹಾಗೂ ಮಲ್ಪೆಯ ಮುಳುಗುತಜ್ಞ ಈಶ್ವರ್ ಸತತ 4 ಗಂಟೆ ಗಳ ಕಾಲ ಕಾರ್ಯಚರಣೆ ನಡೆಸಿ ಶವವನ್ನು ಪತ್ತೆಹಚ್ಚಿದ್ದಾರೆ. ರವಿವಾರ ರಾತ್ರಿ ಬೆಳಕಿನ ಅಡಚನೆಯಿಂದಾಗಿ ಕಾರ್ಯಚರಣೆ ಸ್ಥಗಿತಗೊಳಿಸಲಾಗಿತ್ತು.

- Advertisement -

Latest News

error: Content is protected !!