Sunday, June 7, 2026
Homeಕರಾವಳಿಕಡಬ: ಶಬ್ದ ಮಾಲಿನ್ಯ ತಡೆಯುವಂತೆ ಆಗ್ರಹಿಸಿ ಕಡಬ ತಹಶೀಲ್ದಾರರಿಗೆ ಶ್ರೀ ರಾಮ ಸೇನೆಯಿಂದ ಮನವಿ!

ಕಡಬ: ಶಬ್ದ ಮಾಲಿನ್ಯ ತಡೆಯುವಂತೆ ಆಗ್ರಹಿಸಿ ಕಡಬ ತಹಶೀಲ್ದಾರರಿಗೆ ಶ್ರೀ ರಾಮ ಸೇನೆಯಿಂದ ಮನವಿ!

- Advertisement -
- Advertisement -

ಕಡಬ: ನಗರದಲ್ಲಿ ಶಬ್ದ ಮಾಲಿನ್ಯ ತಡೆಯುವಂತೆ ಆಗ್ರಹಿಸಿ ಕಡಬ ತಹಶೀಲ್ದಾರರಿಗೆ ಶ್ರೀ ರಾಮ ಸೇನೆಯಿಂದ ಸೋಮವಾರ ಮನವಿ ಪಾತ್ರವನ್ನು ಸಲ್ಲಿಸಿದ್ದಾರೆ.

ಮನವಿಯಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಿನ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳಿದ್ದು, ಪ್ರಾರ್ಥನೆ, ಭಕ್ತಿಗೀತೆ, ಭಜನೆಗೆ ವಿರೋಧವಿಲ್ಲ ಆದರೆ ಆಸ್ಪತ್ರೆ, ಶಾಲಾ ಕಾಲೇಜು,ಜನವಸತಿ ಪ್ರದೇಶ, ಕೋರ್ಟ್‌ ಸರ್ಕಾರಿ ಕಚೇರಿಗಳು,ದೇವಸ್ಥಾನ, ಮಸೀದಿ ಚರ್ಚೆಗಳನ್ನು ನಿಶ್ಯಬ್ದ ವಲಯವೆಂದು ಸರ್ವೋಚ್ಚ ನ್ಯಾಯಾಲಯದ ತೀರ್ಪಿದ್ದರೂ ಶಬ್ದ ಮಾಲಿನ್ಯ ನಿರಂತರ ನಡೆಯುತ್ತಲೇ ಇದೆ ಎಂದು ಹೇಳಿದ್ದಾರೆ.

ಇನ್ನು ಪರವಾನಿಗೆ ಇಲ್ಲದ ಮೈಕ್ ತೆರವುಗೊಳಿಸಲು ಸರ್ವೋಚ್ಚ ನ್ಯಾಯಾಲಯದ ಆಜ್ಞೆ ಇದ್ದರೂ ತಮ್ಮ ಇಲಾಖೆ ಹಾಗೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ರಾತ್ರಿ 10ರಿಂದ ಬೆಳಿಗ್ಗೆ 6 ರ ವರೆಗೆ ಮೈಕ್ ನಿರ್ಬಂಧ ಇದ್ದರೂ ಬೆಳಿಗ್ಗೆ 5 ಕ್ಕೆ ಮಸೀದಿಯಲ್ಲಿ ಬೆಳಿಗ್ಗೆ 5ಕ್ಕೆ ಅಜಾನ್ ಕೂಗುತ್ತಿದ್ದರು ಯಾಕೆ ತಡೆಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ವೃದ್ಧರ, ವಿದ್ಯಾರ್ಥಿಗಳ ಕಾರ್ಮಿಕರ, ರೋಗಿಗಳು ಸಾಮಾನ್ಯ ಜನರ ನೆಮ್ಮದಿ ಭಂಗಗೊಳಿಸುತ್ತಿರುವುದು ಸಂವಿಧಾನ ವಿರೋಧಿಯಾಗಿದೆ ಇದು ತಮ್ಮ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.ನ್ಯಾಯಾಲಯದ ಆಜ್ಞೆಯಿದ್ದರೂ ಪೊಲೀಸರ ಅಸಡ್ಡೆ ನಿರ್ಲಕ್ಷ್ಯದಿಂದಾಗಿ ದಿನೇ ದಿನೇ ಶಬ್ದ ಮಾಲಿನ್ಯ ಹೆಚ್ಚುತ್ತಲೇ ಇದೆ. ಇದು ಸಂವಿಧಾನ ಕಾನೂನು, ನ್ಯಾಯಾಂಗ ನಿಂದನೆ ಸ್ಪಷ್ಟವಾಗಿದೆ. ತಾಲೂಕಿನಲ್ಲಿ ಈ ಆಜ್ಞೆಯನ್ನು ಜಾರಿಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯವೆಂದು ಮನವಿಯಲ್ಲಿ ತಿಳಿಸಿದ್ದಾರೆ.

ತಹಶಿಲ್ದಾರ್ ಗೆ ಮನವಿ ನೀಡುವಾಗ ಶ್ರೀ ರಾಮ ಸೇವೆ ಕಡಬ ತಾಲೂಕು ಪ್ರಮುಖರಾದ ಗೋಪಾಲ ನಾಯ್ಕ್ ಮೇಲಿನ ಮನೆ ಕಡಬ , ತಾಲೂಕು ಉಪಾಧ್ಯಕ್ಷರಾದ ದಯಾನಂದ ಕೊಡಿಂಬಾಳ , ರಾಜೇಶ್ ಅಚಾರ್ಯ ಕೊಡಿಂಬಾಳ, ಗೋವರ್ಧನ ಅಮೇಯಿ ಪೆಜಕ್ಕಲ, ಪ್ರದೀಪ್ ಅಂಗಡಿಮನೆ ಕಡಬ ಜೊತೆಯಲ್ಲಿದ್ದರು.

- Advertisement -

Latest News

error: Content is protected !!