Thursday, May 23, 2024
Homeಕರಾವಳಿಉಡುಪಿಉಡುಪಿ: ಕೊನೆಗೂ ಸಂತೋಷ್‌ ಕುಟುಂಬಸ್ಥರನ್ನು ಮನವೊಲಿಸಿದ ಪೊಲೀಸರು: ಮೃತದೇಹ ಮರಣೋತ್ತರ ಪರೀಕ್ಷೆಗೆ ಮಣಿಪಾಲಕ್ಕೆ ರವಾನೆ

ಉಡುಪಿ: ಕೊನೆಗೂ ಸಂತೋಷ್‌ ಕುಟುಂಬಸ್ಥರನ್ನು ಮನವೊಲಿಸಿದ ಪೊಲೀಸರು: ಮೃತದೇಹ ಮರಣೋತ್ತರ ಪರೀಕ್ಷೆಗೆ ಮಣಿಪಾಲಕ್ಕೆ ರವಾನೆ

spot_img
- Advertisement -
- Advertisement -

ಉಡುಪಿ: ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾದ  ಗುತ್ತಿಗೆದಾರ ಸಂತೋಷ್ ಪಾಟೀಲ್ ಮೃತದೇಹವನ್ನು ಮೂವತ್ತು ಗಂಟೆಗಳ ಬಳಿಕ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಯಿತು. ಉಡುಪಿಯ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಸಮೀಪದ ಶಾಂಭವಿ ಲಾಡ್ಜಿನಲ್ಲಿ ನಿನ್ನೆ ಅವರು ಸೂಸೈಡ್ ಮಾಡಿದ್ದರು.

ಪಂಚನಾಮೆ ಪ್ರಕ್ರಿಯೆ ಮುಕ್ತಾಯಗೊಂಡು ಹಲವು ತಾಸು ಕಳೆದರೂ ಕುಟುಂಬಸ್ಥರು ಶವವನ್ನು‌ ಮರಣೋತ್ತರ ಪರೀಕ್ಷೆಗೆ ರವಾನಿಸಲು ಅನುಮತಿ ನೀಡಿರಲಿಲ್ಲ.ಮುಖ್ಯವಾಗಿ ಸಾವಿಗೆ ಕಾರಣಕರ್ತರಾದ ಸಚಿವ ಈಶ್ವರಪ್ಪ ಮತ್ತಿತರರನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದಿದ್ದರು.ಹಲವು ತಾಸುಗಳ ಕಾಲ ಪೊಲೀಸರು ಮನ ಒಲಿಸಿದ ಬಳಿಕ ,ಈಗ ಮಣಿಪಾಲ ಕೆಎಂಸಿ ಶವಾಗಾರಕ್ಕೆ ಮೃತದೇಹವನ್ನು ರವಾನೆ ಮಾಡಲಾಯಿತು.

ಶಾಂಭವಿ ಲಾಡ್ಜ್ ನಿಂದ  ಆಂಬುಲೆನ್ಸ್ ಮೂಲಕ ಮಣಿಪಾಲದ ಕೆಎಂಸಿ ಶವಾಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದೆ.ರಾತ್ರಿ ವೇಳೆಗೆ ಮರಣೋತ್ತರ ಪರೀಕ್ಷೆ ಮುಗಿದು ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಆಗಲಿದೆ.

- Advertisement -
spot_img

Latest News

error: Content is protected !!