Saturday, June 6, 2026
Homeಅಪರಾಧಜಾತ್ರೆಗೆ ಹೋಗಿ ಬರುವಷ್ಟರಲ್ಲಿ ಬೈಕ್ ಕಳವು; ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಜಾತ್ರೆಗೆ ಹೋಗಿ ಬರುವಷ್ಟರಲ್ಲಿ ಬೈಕ್ ಕಳವು; ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಬಂಟ್ವಾಳ: ವ್ಯಕ್ತಿಯೋರ್ವ ಫರಂಗಿಪೇಟೆ ದೇವಸ್ಥಾನದ ಬಳಿ ಬೈಕ್ ಅನ್ನು ನಿಲ್ಲಿಸಿ ಜಾತ್ರೆಗೆ ಹೋಗಿ ಹಿಂದೆ ಬರುವಷ್ಟರಲ್ಲಿ ಬೈಕ್ ಕಳವಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫರಂಗಿಪೇಟೆ ಸಮೀಪದ ತೆಕಿಹಿತ್ತು ನಿವಾಸಿ ಚಂದ್ರಶೇಖರ (53)

ಘಟನೆಯ ವಿವರ: ಫರಂಗಿಪೇಟೆಯ ಚಂದ್ರಶೇಖರ ಅವರು ಫೆ 15 ರಂದು ಸಂಜೆ ತನ್ನ ಬೈಕನ್ನು ಪುದು ಗ್ರಾಮದ ಫರಂಗಿಪೇಟೆಯ ವರದೇಶ್ವರ ದೇವಸ್ಥಾನದ ಬಳಿ ರಸ್ತೆ ಬದಿ ನಿಲ್ಲಿಸಿ ದೇವಸ್ಥಾನದ ಜಾತ್ರೆಗೆ ತೆರಳಿದ್ದರು. ಜಾತ್ರೆ ಮುಗಿಸಿ ರಾತ್ರಿ ವೇಳೆ ವಾಪಾಸು ಬಂದಾಗ ಬೈಕ್ ಕಾಣೆಯಾಗಿರುತ್ತದೆ. ಕಳವಾದ ಬೈಕಿನ ಮೌಲ್ಯ ಸುಮಾರು 15 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!