Thursday, July 16, 2026
Homeಕರಾವಳಿಮಂಗಳೂರು: ಸೇಂಟ್ ಜೆರೋಸಾ ಶಾಲೆ ಪ್ರಕರಣ: ವಿದ್ಯಾರ್ಥಿನಿಯ ಪೋಷಕಿಗೆ ಬೆದರಿಕೆ ಕರೆ, ದೂರು ದಾಖಲು

ಮಂಗಳೂರು: ಸೇಂಟ್ ಜೆರೋಸಾ ಶಾಲೆ ಪ್ರಕರಣ: ವಿದ್ಯಾರ್ಥಿನಿಯ ಪೋಷಕಿಗೆ ಬೆದರಿಕೆ ಕರೆ, ದೂರು ದಾಖಲು

- Advertisement -
- Advertisement -

ಮಂಗಳೂರು: ಸೇಂಟ್ ಜೆರೋಸಾ ಶಾಲೆಯ ಶಿಕ್ಷಕಿ ಧರ್ಮ ಅವಹೇಳನ ಆರೋಪ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ.

ಶಿಕ್ಷಕಿ ವಿರುದ್ದ ಆರೋಪ ಮಾಡಿದ್ದ ಪೋಷಕಿಗೆ ವಿದೇಶದಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದು, ಪೋಷಕಿಯ ಕುಟುಂಬದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ಬೆದರಿಕೆ ಹಾಕಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.

ಜೆಪ್ಪಿನಮೊಗರು ನಿವಾಸಿಯಾಗಿರುವ ಪೋಷಕಿ ಕವಿತಾ ಅವರಿಗೆ ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದು, ಕಂಕನಾಡಿ ನಗರ ಪೊಲೀಸ್ ಠಾಣೆಗೆ‌ ಕವಿತಾ ದೂರು ನೀಡಿದ್ದಾರೆ.

ಕವಿತಾ ಪುತ್ರಿ ಸೇಂಟ್ ಜೆರೋಸಾ ಶಾಲೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಶಿಕ್ಷಕಿ ಸಿಸ್ಟರ್ ಪ್ರಭಾ ವಿರುದ್ದ ಪೋಷಕರ ಪ್ರತಿಭಟನೆಯಲ್ಲೂ ಕವಿತಾ ಭಾಗವಹಿಸಿದ್ದರು.

ಶಿಕ್ಷಕಿ ಆಡಿಯೋ ವೈರಲ್ ಮಾಡಿದ್ದು ಪೋಷಕಿ ಕವಿತಾ ಎಂದು ಆರೋಪಿಸಿ ಬೆದರಿಕೆ ಹಾಕಲಾಗಿದ್ದು, ಕತಾರ್, ದುಬೈ, ಸೌದಿ ಅರೇಬಿಯಾ ಸೇರಿದಂತೆ ಹಲವೆಡೆಯಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದು,ಹಲವು ವಿದೇಶಿ ನಂಬರ್ ಗಳಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆರೋಪಿಸಿ ಕವಿತಾ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!