Tuesday, June 9, 2026
Homeಕರಾವಳಿಉಡುಪಿಉಡುಪಿ ಶಾಸಕ ಯಶಪಾಲ್‌ ಸುವರ್ಣ ಅವರಿಗೆ ಜೀವ ಬೆದರಿಕೆಯೊಡ್ಡಿದ್ದ ಯುವಕನ ಬಂಧನ

ಉಡುಪಿ ಶಾಸಕ ಯಶಪಾಲ್‌ ಸುವರ್ಣ ಅವರಿಗೆ ಜೀವ ಬೆದರಿಕೆಯೊಡ್ಡಿದ್ದ ಯುವಕನ ಬಂಧನ

- Advertisement -
- Advertisement -

ಉಡುಪಿ:ಉಡುಪಿ ಶಾಸಕ ಯಶಪಾಲ್‌ ಸುವರ್ಣ ಅವರಿಗೆ ಜೀವ ಬೆದರಿಕೆಯೊಡ್ಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಬಜ್ಪೆ ನಿವಾಸಿ ಮಹಮ್ಮದ್‌ ಆಸಿಫ್ (32) ಬಂಧಿತ ಆರೋಪಿ.ಆಸಿಫ್ ಗೆ ಕಾಪು ಪೊಲೀಸರು ಜೂ. 22ರಂದು ಮುಂಬಯಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ .

ಕಳೆದ ವರ್ಷ ಕರಾವಳಿಯಲ್ಲಿ ಹಿಜಾಬ್‌ ವಿವಾದದ ವೇಳೆ ಯಶಪಾಲ್‌ ಸುವರ್ಣ ಅವರಿಗೆ ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆಯೊಡ್ಡಿದ್ದರು ಎಂದು ಆರೋಪಿಸಲಾಗಿತ್ತು.ಈ ಬಗ್ಗೆ ಆರೋಪಿಗಳನ್ನು ಬಂಧಿಸುವಂತೆ ಕಾಪು ಕ್ಷೇತ್ರ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ಕಾಪು ಠಾಣೆಗೆ ದೂರು ನೀಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಬಜ್ಪೆ ಸಮೀಪದ ಕೆಂಜಾರು ನಿವಾಸಿ ಮಹಮ್ಮದ್‌ ಶಾಫಿ (26)ನ್ನು ಈ‌ ಮೊದಲು ಪೊಲೀಸರು ಬಂಧಿಸಿದ್ದರು.ಇದೀಗ ಆಸಿಫ್ ವಿದೇಶದಿಂದ ಮುಂಬಯಿ ವಿಮಾನ ನಿಲ್ದಾಣಕ್ಕೆ ಬರುವ ಮಾಹಿತಿ ಪಡೆದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಬಂಧನದ ಬಳಿಕ ಕೋರ್ಟ್‌ಗೆ ಹಾಜರುಪಡಿಸಿದ್ದು ಆಸಿಫ್ ನನ್ನು ಒಂದು ದಿನದ ಪೊಲೀಸ್‌ ಕಸ್ಟಡಿ ನೀಡಲಾಗಿದೆ.

- Advertisement -

Latest News

error: Content is protected !!