Sunday, June 7, 2026
Homeಕರಾವಳಿಕಡಬ; ಕೋಡಿಂಬಾಳದಲ್ಲಿ  ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೃತದೇಹ ಪತ್ತೆ

ಕಡಬ; ಕೋಡಿಂಬಾಳದಲ್ಲಿ  ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೃತದೇಹ ಪತ್ತೆ

- Advertisement -
- Advertisement -

ಕಡಬ; ಕೋಡಿಂಬಾಳದ  ಸಮೀಪದ ನೆಕ್ಕಿಲಾಡಿ ಗ್ರಾಮದ ಕೋರಿಯರ್ ಎಂಬಲ್ಲಿ  ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.ಸಕಲೇಶಪುರ ಬಾಲಗದ್ದೆ ನಿವಾಸಿ, ಧರ್ಮಯ್ಯ (40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಘಟನಾ ಸ್ಥಳಕ್ಕೆ ಬಂದ ಪೊಲೀಸರು ಶೌರ್ಯ ಮತ್ತು ಆಪದ್ಬಾಂಧವ ತಂಡದ ಸದಸ್ಯರ ಸಹಕಾರದೊಂದಿಗೆ ನದಿಯಲ್ಲಿ ಹುಡುಕಾಟ ನಡೆಸಿದಾಗ  ಮೃತ ದೇಹ ಪತ್ತೆಯಾಗಿದೆ. ಶೌರ್ಯ ತಂಡದ ಮುರಳಿ, ಸೋಮಪ್ಪ, ಆನಂದ ಅಪರ್ಣ, ಆಪದ್ಬಾಂಧವ ತಂಡದ ಸದಸ್ಯರಾದ ರಫೀಕ್, ಮನೋಜ್, ಅನಿಲ್ ಸೇರಿದಂತೆ ಸ್ಥಳೀಯರು ನದಿಯಲ್ಲಿ ಮೃತ ದೇಹ ಪತ್ತೆಹಚ್ಚಲು ಸಹಕರಿಸಿದ್ದರು.

ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈತ ರಬ್ಬರ್ ಕಟ್ಟಿಂಗ್ ಕೆಲಸಕ್ಕೆ ಸಕಲೇಶಪುರದಿಂದ ಕೋಡಿಂಬಾಳ ಬಂದಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

- Advertisement -

Latest News

error: Content is protected !!