Monday, June 29, 2026
Homeಕರಾವಳಿಉಡುಪಿಉಡುಪಿ: ದಿಂಗಾಲೇಶ್ವರ ಸ್ವಾಮೀಜಿಗಳ ಆರೋಪ‌ ಅಪ್ಪಟ ಸುಳ್ಳು: ಗಾಳಿಯಲ್ಲಿ ಗುಂಡು ಹಾರಿಸಿದರೆ ಸರಿಯಲ್ಲ‌, ದಾಖಲೆ ಕೊಡಿ:...

ಉಡುಪಿ: ದಿಂಗಾಲೇಶ್ವರ ಸ್ವಾಮೀಜಿಗಳ ಆರೋಪ‌ ಅಪ್ಪಟ ಸುಳ್ಳು: ಗಾಳಿಯಲ್ಲಿ ಗುಂಡು ಹಾರಿಸಿದರೆ ಸರಿಯಲ್ಲ‌, ದಾಖಲೆ ಕೊಡಿ: ವಜ್ರದೇಹಿ ಸ್ವಾಮೀಜಿ

- Advertisement -
- Advertisement -

ಉಡುಪಿ: ಸರ್ಕಾರದಲ್ಲಿ ಮಠಗಳಿಗೆ ಬಿಡುಗಡೆ ಮಾಡುವ ಅನುದಾನದಲ್ಲೂ ಕಮಿಷನ್ ಹೋಗುತ್ತದೆ ಎಂಬ ದಿಂಗಾಲೇಶ್ವರ ಶ್ರೀ ಗಳ ಆರೋಪಕ್ಕೆ ವಜ್ರದೇಹಿ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.

ಮಠಮಾನ್ಯಗಳಿಂದಲೂ ಕಮಿಷನ್ ಪಡೆಯಲಾಗುತ್ತದೆ ಎಂಬ ದಿಂಗಾಲೇಶ್ವರ ಸ್ವಾಮೀಜಿಗಳ ಆರೋಪ‌ ಅಪ್ಪಟ ಸುಳ್ಳು. ಈ ಬಗ್ಗೆ ನಾನು ಖಡಾಖಂಡಿತವಾಗಿ ಹೇಳುತ್ತೇನೆ. ನಮ್ಮ ಮಠಕ್ಕೂ 50 ಲಕ್ಷ ಬಂದಿದೆ. ನಾವ್ಯಾರೂ ಒಂದು ರೂಪಾಯಿ ಕಮಿಷನ್ ನೀಡಿಲ್ಲ. ಯಾವುದೇ ಹಂತದಲ್ಲೂ ಸರ್ಕಾರದ ಅಧಿಕಾರಿಗಳಿಗೆ ಕಮಿಷನ್ ಕೊಟ್ಟಿಲ್ಲ .ಇಂತಹ ಸುಳ್ಳು ಸಂದೇಶ ಹಬ್ಬಿಸಬಾರದು. ಎಲ್ಲೋ ಆದ ಘಟನೆ ನಮ್ಮಲ್ಲೂ ಆಗಿದೆ ಎನ್ನುವುದು ಸರಿಯಲ್ಲ. ನನಗೆ ಗೊತ್ತಿರುವ ಯಾವುದೇ ಶ್ರೀಗಳು ಒಂದು ನಯಾಪೈಸೆ‌ ಕಮಿಷನ್ ಕೊಟ್ಟಿಲ್ಲ. ಗಾಳಿಯಲ್ಲಿ ಗುಂಡು ಹಾರಿಸಿದರೆ ಸರಿಯಲ್ಲ‌, ದಾಖಲೆ ಕೊಡಿ ಎಂದು ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಸವಾಲು ಹಾಕಿದ್ದಾರೆ.

- Advertisement -

Latest News

error: Content is protected !!