Monday, June 8, 2026
Homeರಾಜಕೀಯಕಾಂಗ್ರೆಸ್ ಪಕ್ಷದ ಬಗ್ಗೆ ಕಾಳಜಿ ತೋರಿಸಿದ ಸಚಿವ ಆರ್. ಅಶೋಕ್‌‌ಗೆ ಧನ್ಯವಾದಗಳು: ಯುಟಿ ಖಾದರ್

ಕಾಂಗ್ರೆಸ್ ಪಕ್ಷದ ಬಗ್ಗೆ ಕಾಳಜಿ ತೋರಿಸಿದ ಸಚಿವ ಆರ್. ಅಶೋಕ್‌‌ಗೆ ಧನ್ಯವಾದಗಳು: ಯುಟಿ ಖಾದರ್

- Advertisement -
- Advertisement -

ಬೆಂಗಳೂರು: ಕಾಂಗ್ರೆಸ್ ಪಕ್ಷದ ಬಗ್ಗೆ ಕಾಳಜಿ ತೋರಿಸಿದ ಸಚಿವ ಆರ್. ಅಶೋಕ್‌‌ಗೆ ಧನ್ಯವಾದಗಳು. ಆದರೆ ನಮ್ಮಲ್ಲಿ ಯಾವುದೇ ಒಡಕಿಲ್ಲ. ನಾವು ಒಗ್ಗಟ್ಟಾಗಿದ್ದೇವೆ ಎಂದು ವಿಧಾನ ಸಭೆ ವಿರೋಧ ಪಕ್ಷದ ಉಪನಾಯಕ ಯುಟಿ ಖಾದರ್ ಹೇಳಿದ್ದಾರೆ.

ಸಿದ್ದರಾಮಯ್ಯರನ್ನು ಸೋಲಿಸಲು ಕಾಂಗ್ರೆಸ್ ನಲ್ಲಿ ಸಂಚು ರೂಪಿತವಾಗಿದೆ ಎಂಬ ಆಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಖಾದರ್, ಕಾಂಗ್ರೆಸ್ ಪಕ್ಷದ ಬಗ್ಗೆ ಕಾಳಜಿ ತೋರಿಸಿದ ಆಶೋಕ್ ಗೆ ಧನ್ಯವಾದಗಳು. ಆದರೆ ನಮ್ಮಲ್ಲಿ ಯಾವುದೇ ಒಡಕಿಲ್ಲ. ನಾವು ಒಗ್ಗಟ್ಟಾಗಿದ್ದೇವೆ. ಜನರಿಗೆ ವಿರೋಧ ಪಕ್ಷದಲ್ಲಿ ಏನಾಗುತ್ತಿದೆ ಎನ್ನುವುದು ಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಇನ್ನು ನೀಟ್ ಪರೀಕ್ಷೆಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ನೀಟ್ ತೆಗೆದುಹಾಕಿ ಸಿಇಟಿ ಆಧಾರದಲ್ಲಿ ಸೀಟ್ ಕೊಡಲಿ. ನೀಟ್ ಬೇಡ ಸಿಇಟಿ ಪರೀಕ್ಷೆ ಜಾರಿಯಾಗಲಿ ಎಂದು ಆಗ್ರಹಿಸಿದ್ದಾರೆ.

ಉಕ್ರೇನ್, ರಷ್ಯಾ ಯುದ್ಧದಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಿದ್ದು, ಆಡಳಿತದಲ್ಲಿರುವ ಸರ್ಕಾರಗಳು ಅವರ ಸಮಸ್ಯೆ ಬಗೆಹರಿಸಬೇಕು.ಈ ಬಗ್ಗೆ ರಾಜೀವ್ ಗಾಂಧಿ ವಿವಿ ಜತೆ ಚರ್ಚೆ ಮಾಡಿ ಮಾರ್ಗ ಹುಡುಕಿಕೊಳ್ಳಬೇಕು ಎಂದು ಹೇಳಿದ್ದಾರೆ.

- Advertisement -

Latest News

error: Content is protected !!