Wednesday, June 3, 2026
Homeಕರಾವಳಿಉಳ್ಳಾಲ ಪೊಲೀಸ್ ಠಾಣೆ ಪ್ರತ್ಯೇಕಿಸುವ ಪ್ರಸ್ತಾವನೆ ಸದ್ಯಕ್ಕಿಲ್ಲ : ವಿಧಾನಸಭೆಯಲ್ಲಿ ಗೃಹ ಇಲಾಖೆ ಸ್ಪಷ್ಟನೆ

ಉಳ್ಳಾಲ ಪೊಲೀಸ್ ಠಾಣೆ ಪ್ರತ್ಯೇಕಿಸುವ ಪ್ರಸ್ತಾವನೆ ಸದ್ಯಕ್ಕಿಲ್ಲ : ವಿಧಾನಸಭೆಯಲ್ಲಿ ಗೃಹ ಇಲಾಖೆ ಸ್ಪಷ್ಟನೆ

- Advertisement -
- Advertisement -

ಬೆಂಗಳೂರು: ಉಳ್ಳಾಲ ಪೊಲೀಸ್ ಠಾಣೆಯನ್ನು ವಿಭಜಿಸುವ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದು ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ ಉತ್ತರಿಸಿದೆ.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಂಗಳೂರು ಶಾಸಕ ಮತ್ತು ವಿಪಕ್ಷ ಉಪನಾಯಕ ಯು.ಟಿ. ಖಾದರ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಉಳ್ಳಾಲ ಗ್ರಾಮಾಂತರ (ಕುತ್ತಾರು) ಪೊಲೀಸ್ ಠಾಣೆಯನ್ನು ಸೃಜಿಸುವ ಪ್ರಸ್ತಾವನೆ ರಾಷ್ಟ್ರೀಯ ಪೊಲೀಸ್ ಮಾನದಂಡಗಳನ್ನು ಪೂರೈಸಿಲ್ಲ ಎಂದು ಹೇಳಿದ್ದಾರೆ‌.

ಮುಂದಿನ ದಿನಗಳಲ್ಲಿ ಮಾನದಂಡಗಳನ್ನು ಪೂರೈಸಿದಲ್ಲಿ ಪ್ರತ್ಯೇಕಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಗೃಹ ಸಚಿವರು ಉತ್ತರ ನೀಡಿದ್ದಾರೆ.

ಉಳ್ಳಾಲ ಪೊಲೀಸ್ ಠಾಣೆಯನ್ನು ಪ್ರತ್ಯೇಕಿಸಿ ಉಳ್ಳಾಲ ನಗರ ಮತ್ತು ಉಳ್ಳಾಲ ಗ್ರಾಮಾಂತರ ಎಂದು ಕಾರ್ಯಾರಂಭಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆಯೇ ಎಂದು ಶಾಸಕ ಖಾದರ್ ಪ್ರಶ್ನೆ ಕೇಳಿದ್ದರು.

- Advertisement -

Latest News

error: Content is protected !!