Saturday, June 6, 2026
HomeUncategorizedಉಪ್ಪಿನಂಗಡಿ: ಬಸ್ಸಲ್ಲಿ ಮಹಿಳೆಯ ಬ್ಯಾಗ್ ನಿಂದ ಚಿನ್ನಾಭರಣ ಕಳವು

ಉಪ್ಪಿನಂಗಡಿ: ಬಸ್ಸಲ್ಲಿ ಮಹಿಳೆಯ ಬ್ಯಾಗ್ ನಿಂದ ಚಿನ್ನಾಭರಣ ಕಳವು

- Advertisement -
- Advertisement -

ಉಪ್ಪಿನಂಗಡಿ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್‌ನಿಂದ 1,76, 000 ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಝರೀನಾ ಎಂಬುವವರು ಕಛೇರಿಯಿಂದ ಉಪ್ಪಿನಂಗಡಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಝರೀನಾ ಬ್ಯಾಗ್‌ನಿಂದ ತಲಾ 14 ಗ್ರಾಂ ತೂಕವಿರುವ ಚಿನ್ನದ 2 ಬಳೆಗಳು, 8 ಗ್ರಾಂ ತೂಕದ 1 ಚಿನ್ನದ ಸರ, ತಲಾ 2 ಗ್ರಾಂ ತೂಕದ 2 ಉಂಗುರ, ತಲಾ 1 ಗ್ರಾಂ ತೂಕದ ಮಕ್ಕಳ 2 ಉಂಗುರ, 2 ಗ್ರಾಂ ತೂಕದ ಮಗುವಿನ ಕಿವಿಯ 1ಬೆಂಡೋಲೆ ಸೇರಿ ಜೊತೆ ಒಟ್ಟು 44ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳರು ಎಗರಿಸಿದ್ದಾರೆ. ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯರೂ 1,76,000 ಆಗಿದೆ.ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!