Saturday, January 16, 2021
Home ಕ್ರೀಡೆ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್: ಟೂರ್ನಿಯಿಂದ ಹೊರಬಿದ್ದ ಷಟ್ಲರ್ ಸೈನಾ ನೆಹ್ವಾಲ್

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್: ಟೂರ್ನಿಯಿಂದ ಹೊರಬಿದ್ದ ಷಟ್ಲರ್ ಸೈನಾ ನೆಹ್ವಾಲ್

- Advertisement -
- Advertisement -

ಬ್ಯಾಂಕಾಕ್: ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ನಿರಾಸೆ ಅನುಭವಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಭಾರತದ ಸಿಂಗಲ್ಸ್ ವಿಭಾಗದ ಹೋರಾಟ ಅಂತ್ಯಗೊಂಡಂತಾಗಿದೆ.

ಇಂದು ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಸೈನಾ ನೆಹ್ವಾಲ್ 23-21, 14-21, 16-21 ರಿಂದ ಸ್ಥಳೀಯ ಆಟಗಾರ್ತಿ ಬುಸಾನನ್ ಎದುರು 68 ನಿಮಿಷಗಳ ಕಾದಾಟದಲ್ಲಿ ಸೋಲು ಕಂಡರು. ವಿಶ್ವ ನಂ.12 ಥಾಯ್ಲೆಂಡ್ ಆಟಗಾರ್ತಿ ಎದುರು ಸೈನಾ ಅನುಭವಿಸಿದ ಸತತ 4ನೇ ಸೋಲು ಇದಾಗಿದೆ.

ಪುರುಷರ ಡಬಲ್ಸ್ ವಿಭಾಗದಲ್ಲಿ ಭರವಸೆಯ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ, ಇಂಡೋನೇಷ್ಯಾದ ಮೊಹಮದ್ ಅಶಾನ್ ಹಾಗೂ ಹೆಂದ್ರಾ ಸೆಟಿಯಾವನ್ ಜೋಡಿಗೆ ಶರಣಾಯಿತು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮಾಜಿ ವಿಶ್ವ ನಂ.1 ಕೆ.ಶ್ರೀಕಾಂತ್ ಎರಡನೇ ಸುತ್ತಿನ ಪಂದ್ಯದಿಂದ ಹಿಂದೆ ಸರಿದರು. ಸ್ನಾಯು ಸೆಳೆತಕ್ಕೆ ಒಳಗಾದ ಶ್ರೀಕಾಂತ್ ಕಣಕ್ಕಿಳಿಯಲಿಲ್ಲ. ಮಲೇಷ್ಯಾದ 8ನೇ ಶ್ರೇಯಾಂಕಿತ ಆಟಗಾರ ಲೀ ಜೀ ಅವರನ್ನು ಶ್ರೀಕಾಂತ್ ಎದುರಿಸಬೇಕಿತ್ತು.

ಪದೆ ಪದೇ ಕೋವಿಡ್ ಟೆಸ್ಟ್‌ಗೆ ಒಳಗಾಗಿ ಮೂಗಿನಲ್ಲಿ ರಕ್ತಸ್ರಾವಗಿದ್ದರಿಂದ ಮಂಗಳವಾರವಷ್ಟೇ ನೋವು ತೋಡಿಕೊಂಡಿದ್ದ ಕೆ.ಶ್ರೀಕಾಂತ್, ಇಂದು ಸ್ನಾಯು ಸೆಳೆತಕ್ಕೆ ಒಳಗಾಗಿ ಪಂದ್ಯದಿಂದ ಹಿಂದೆ ಸರಿದರು.

- Advertisement -
- Advertisment -

Latest News

error: Content is protected !!