Friday, April 26, 2024
Homeತಾಜಾ ಸುದ್ದಿ5 ಮಂದಿಗೆ ಅಂಗಾಂಗ ದಾನ ಮಾಡಿದ ಮರು ಜನ್ಮ ಪಡೆದ 20 ತಿಂಗಳ ಮಗು

5 ಮಂದಿಗೆ ಅಂಗಾಂಗ ದಾನ ಮಾಡಿದ ಮರು ಜನ್ಮ ಪಡೆದ 20 ತಿಂಗಳ ಮಗು

spot_img
- Advertisement -
- Advertisement -

ನವದೆಹಲಿ: ದೆಹಲಿಯ ರೋಹಿಣಿ ಪ್ರದೇಶದ 20 ತಿಂಗಳ ಮಗು ಧನಿಷ್ಠಾ ಎಂಬ ಹೆಸರಿನ ಈ ಮಗು ಈಗ ಹೆಚ್ಚು ಸುದ್ದಿಯಲ್ಲಿದೆ . ಆಕೆ ಅತ್ಯಂತ ಕಿರಿಯ ಅಂಗಾಗ ದಾನಿಯಾಗಿ ಈಗ ಗುರುತಿಸಿಕೊಂಡಿದ್ದಾರೆ. ಧನಿಷ್ಠಾ ತನ್ನ ಸಾವಿನ ತರುವಾಯ ಬಹು ಅಂಗಾಂಗಗಳನ್ನು ದಾನ ವಾಗಿ ನೀಡಿ ಸಾವಿನ ಬಳಿಕ ಕೂಡ ಇತರರಲ್ಲಿ ಮರು ಜನ್ಮ ಪಡೆದುಕೊಂಡಿದೆ.

ಧನಿಷ್ಠಾ ಐದು ರೋಗಿಗಳಿಗೆ ಹೊಸ ಜೀವದಾನ ವನ್ನು ನೀಡಿದ್ದಾರೆ. ಆಕೆಯ ಹೃದಯ, ಯಕೃತ್ತು, ಮೂತ್ರಪಿಂಡಗಳು ಮತ್ತು ಕಾರ್ನಿಯಾಗಳನ್ನು ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಪುನಃ ಪಡೆಯಲಾಯಿತು ಮತ್ತು ಐದು ರೋಗಿಗಳಿಗೆ ಬಳಸಲಾಗಿದೆ.

ಜನವರಿ 8ರ ಸಂಜೆ ಆಟವಾಡುತ್ತಿದ್ದಾಗ ಮನೆಯ ಮೊದಲ ಮಹಡಿಯ ಬಾಲ್ಕನಿಯಿಂದ ಧನಿಷ್ಠಾ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಆಕೆಯನ್ನು ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆಕೆಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಜನವರಿ 11ರಂದು ಮಗು ಮೆದುಳು ನಿಷ್ಕ್ರಿಯವಾಗಿದೆ ಎಂದು ಘೋಷಿಸಲಾಗಿತ್ತು. ಈ ವೇಳೆಯಲ್ಲಿ ವೈದ್ಯರು ಆಕೆಯ ಉಳಿದ ಎಲ್ಲಾ ಅಂಗಗಳು ಅತ್ಯುತ್ತಮ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದವು ಅಂತ ಆಕೆಯ ಹೆತ್ತವರಿಗೆ ತಿಳಿಸಿದ್ದಾರೆ. ಈ ವೇಳೆ ಧನಿಷ್ಠಾ ಪೋಷಕರಾದ ಆಶಿಶ್ ಕುಮಾರ್ ಮತ್ತು ಬಬಿತಾ ತಮ್ಮ ಮಗುವಿನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದರು. ‘ಆಸ್ಪತ್ರೆಯಲ್ಲಿ ದ್ದಾಗ ಅಂಗಾಂಗಗಳ ಅವಶ್ಯಕತೆ ಇರುವ ಅನೇಕ ರೋಗಿಗಳನ್ನು ಭೇಟಿ ಮಾಡಿದ್ದೇವೆ. ನಾವು ಮಗಳನ್ನು ಕಳೆದುಕೊಂಡರೂ ಸಹ ಅವರು ಈ ‘ಬದುಕುತ್ತಿದ್ದಾರೆ’ ಸುಧಾರಿಸುತ್ತಿದ್ದಾರೆ’ ಎಂದು ಆಶಿಷ್ ಕುಮಾರ್ ಹೇಳಿದ್ದಾರೆ.

ಸರ್ ಗಂಗಾ ರಾಮ್ ಆಸ್ಪತ್ರೆಯ ಅಧ್ಯಕ್ಷ (ಬಿಒಎಂ) ಡಾ.ಡಿಎಸ್ ರಾಣಾ ಅವರ ಪ್ರಕಾರ, ‘ಕುಟುಂಬದ ಈ ಉದಾತ್ತ ಕಾರ್ಯವು ನಿಜಕ್ಕೂ ಶ್ಲಾಘನೀಯವಾಗಿದ್ದು ಮತ್ತು ಇದು ಇತರರಿಗೆ ಪ್ರೇರಣೆಯಾಗಬೇಕು. ಅಂಗಾಂಗ ದಾನದ ಪ್ರಮಾಣ ವು ಪ್ರತಿ ದಶಲಕ್ಷಕ್ಕೆ 0.26 ರಷ್ಟಿದ್ದು, ಭಾರತವು ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಪ್ರತಿ ವರ್ಷ ಸರಾಸರಿ 5 ಲಕ್ಷ ಭಾರತೀಯರು ಅಂಗಾಂಗಗಳ ಕೊರತೆಯಿಂದ ಸಾಯುತ್ತಿದ್ದಾರೆ’ ಎಂದು ಹೇಳಿದರು.

- Advertisement -
spot_img

Latest News

error: Content is protected !!