Thursday, May 2, 2024
Homeಕರಾವಳಿದ.ಕ. ಜಿಲ್ಲಾದ್ಯಂತ ಸುಡುಮದ್ದು ತಯಾರಿಕಾ ಘಟಕಗಳಿಗೆ ತಾತ್ಕಾಲಿಕ ನಿರ್ಬಂಧ

ದ.ಕ. ಜಿಲ್ಲಾದ್ಯಂತ ಸುಡುಮದ್ದು ತಯಾರಿಕಾ ಘಟಕಗಳಿಗೆ ತಾತ್ಕಾಲಿಕ ನಿರ್ಬಂಧ

spot_img
- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುಡುಮದ್ದು ತಯಾರಿಕಾ ಘಟಕಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಲ್ಪಟ್ಟಿದೆ.

ವೇಣೂರಿನಲ್ಲಿ ನಿನ್ನೆ ಸಂಭವಿಸಿದ ಪಟಾಕಿ ಗೋದಾಮು‌ ಸ್ಪೋಟದಲ್ಲಿ ಮೂವರ ಸಾವು ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ನಿರ್ಬಂಧ ವಿಧಿಸಿದೆ.

ಜಿಲ್ಲೆಯಲ್ಲಿ ಪಟಾಕಿ ತಯಾರಿಕೆ, ಮಾರಾಟ ಘಟಕಗಳ ಮರು ಪರಿಶೀಲನೆ ಮಾಡಲು ಮಂಗಳೂರು ಮತ್ತು ಪುತ್ತೂರು ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ತನಿಖಾ ಸಮಿತಿ ರಚನೆ ಮಾಡಲಾಗಿದ್ದು, ಫೆಬ್ರವರಿ 5 ರೊಳಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಮುಂದಿನ ಆದೇಶದವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ಸುಡುಮದ್ದು ತಯಾರಿಕಾ ಘಟಕಗಳನ್ನು ಮುಚ್ಚಲು ಆದೇಶಿಸಲಾಗಿದೆ.

ಸುಪ್ರೀಂ ಕೋರ್ಟ್ ಆದೇಶ ಮತ್ತು ಸರ್ಕಾರದ ಮಾರ್ಗಸೂಚಿ ಪಾಲನೆ ಕುರಿತಾಗಿ ಮರು ಪರಿಶೀಲನೆಗಾಗಿ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.

- Advertisement -
spot_img

Latest News

error: Content is protected !!