Friday, June 5, 2026
Homeಪ್ರಮುಖ-ಸುದ್ದಿಐರ್ಲೆಂಡ್ ವಿರುದ್ಧ ಟಿ-ಟ್ವೆಂಟಿ ಪಂದ್ಯಗಳಿಗೆ ಭಾರತ ತಂಡ ಪ್ರಕಟ : ನಾಯಕನಾಗಿ ಆಲ್ ರೌಂಡರ್ ಹಾರ್ದಿಕ್...

ಐರ್ಲೆಂಡ್ ವಿರುದ್ಧ ಟಿ-ಟ್ವೆಂಟಿ ಪಂದ್ಯಗಳಿಗೆ ಭಾರತ ತಂಡ ಪ್ರಕಟ : ನಾಯಕನಾಗಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ

- Advertisement -
- Advertisement -

ನವದೆಹಲಿ: ಐರ್ಲೆಂಡ್ ವಿರುದ್ಧದ ಎರಡು ಟಿ-ಟ್ವೆಂಟಿ ಕ್ರಿಕೆಟ್ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ.

ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಭಾರತ ತಂಡವನ್ನು ಮುನ್ನೆಡಲಿದ್ದು, ವೇಗದ ಬೌಲರ್ ಭುವನೇಶ್ವರ್ ಕುಮಾರ್ ಉಪನಾಯಕರಾಗಿದ್ದಾರೆ.

ಹಾಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಿದ್ದ ರಿಷಬ್ ಪಂತ್ ಗೆ ವಿಶ್ರಾಂತಿ ನೀಡಲಾಗಿದೆ.

ಐರ್ಲೆಂಡ್ ನ ಡಲ್ಬಿನ್ ದಿ ವಿಲೇಜ್ ನಲ್ಲಿ ಜೂನ್ 26 ಮತ್ತು 28 ರಂದು ಪಂದ್ಯಗಳು ನಡೆಯಲಿವೆ.

ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಆಗಿದ್ದು ಋತುರಾಜ್ ಗಾಯಕವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಟಿ, ದೀಪಕ್ ಹೂಡಾ, ಯಜುವೇಂದ್ರ ಚಹಲ್, ಅಕ್ಷರ್ ಪಟೇಲ್, ಆರ್. ಬಿಷ್ಣೋಯಿ, ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಷ ದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

- Advertisement -

Latest News

error: Content is protected !!