Sunday, May 19, 2024
Homeಕರಾವಳಿಬೆಳ್ತಂಗಡಿ : ರಸ್ತೆಗೆ ಬಿದ್ದ ಬೃಹತ್ ಆಲದ ಮರ ತಪ್ಪಿದ ದೊಡ್ಡ ಅನಾಹುತ: ಅರಣ್ಯ ಇಲಾಖೆ...

ಬೆಳ್ತಂಗಡಿ : ರಸ್ತೆಗೆ ಬಿದ್ದ ಬೃಹತ್ ಆಲದ ಮರ ತಪ್ಪಿದ ದೊಡ್ಡ ಅನಾಹುತ: ಅರಣ್ಯ ಇಲಾಖೆ ಸಿಬ್ಬಂದಿಯಿಂದ ಮರ ತೆರವು ಕಾರ್ಯಾಚರಣೆ

spot_img
- Advertisement -
- Advertisement -

ಬೆಳ್ತಂಗಡಿ : ಗಾಳಿಮಳೆಗೆ ಬೃಹತ್ ಆಲದ ಮರ ರಸ್ತೆಗೆ ಅಡ್ಡಲಾಗಿ ಬುಡಸಮೇತ ಬಿದ್ದಿದೆ ಈ ವೇಳೆ ದೊಡ್ಡ ಅನಾಹುತ ಒಂದು ತಪ್ಪಿದೆ , ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಕಾರ್ಯಾಚರಣೆ ಮಾಡಿ ಮರ ತೆರವು  ಮಾಡಿದ ಘಟನೆ ಬೆಳ್ತಂಗಡಿಯ ಪಿಲಿಚಾಮುಂಡಿ ಕಲ್ಲಿನಲ್ಲಿ ಬುಧವಾರ ತಂಡರಾತ್ರಿ ನಡೆದಿದೆ‌‌.

ಮಂಗಳೂರು – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ದೈವಸ್ಥಾನಕ್ಕೆ ಸಂಬಂಧಪಟ್ಟ ಬೃಹತ್ ಆಲದಮರ ಬುಧವಾರ ತಡರಾತ್ರಿ ಸುಮಾರು 12 ಗಂಟೆ ವೇಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದಿದೆ ಈ ವೇಳೆ ವಾಹನ ಓಡಾಟ ಕಡಿಮೆಯಾಗಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ. 

ಬೃಹತ್ ಆಲದಮರ ಬಿದ್ದು ವಾಹನ ಸಂಚಾರ ಬಂದ್ ಅಗಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಬಂದಿದ್ದು ತಕ್ಷಣ ಅರಣ್ಯರಕ್ಷಕ ರಾಘವೇಂದ್ರ ಪ್ರಸಾದ್ ನೇತೃತ್ವದಲ್ಲಿ ರಾತ್ರಿ ಒಂದು ಗಂಟೆಗೆ ಮೂರು ಮರ ಕಟ್ಟಿಂಗ್ ಮೆಷಿನ್‌ ಹಾಗೂ ಕೆಲಸದವರನ್ನು ತರಿಸಿಕೊಂಡು ಮರವನ್ನು ತುಂಡರಿಸಿದ್ದು ನಂತರ ಕ್ರೇನ್ ಮೂಲಕ ಮರದ ತುಂಡನ್ನು ರಸ್ತೆಯ ಪಕ್ಕಕ್ಕೆ ಹಾಕಿ ಸುಮಾರು 3:30 ಕ್ಕೆ ವಾಹನ ಸಂಚಾರಕ್ಕೆ ಸುಗಮಗೊಳಿಸಿದ್ದಾರೆ.

ಬೃಹತ್ ಆಲದ ಮರ ತೆರವು ಕಾರ್ಯಾಚರಣೆಗೆ ಬೆಳ್ತಂಗಡಿ ಅರಣ್ಯ ಇಲಾಖೆ ಸಿಬ್ಬಂದಿ  , ಸ್ಥಳೀಯರು ಹಾಗೂ ಬೆಳ್ತಂಗಡಿ ಪೊಲೀಸರು ಸಹಕರಿಸಿದರು.

- Advertisement -
spot_img

Latest News

error: Content is protected !!