- Advertisement -
![]()
- Advertisement -
ಕಡಬ: ಗಣತಿ ಕಾರ್ಯ ಮಾಡುತ್ತಿದ್ದ ಶಿಕ್ಷಕಿಯ ಕಾರಿಗೆ ಹಾನಿ ಮಾಡಿರುವ ಘಟನೆ ಅ.5ರಂದು ಬೆಳಿಗ್ಗೆ ಕೋಡಿಂಬಾಳ ವಾರ್ಡ್ ಸಂಖ್ಯೆ 13ರಲ್ಲಿ ನಡೆದಿದೆ. ಕೊಣಾಲು ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ರಮಣಿ ಬಿ ಎಂಬವರು ಶಂಕರ ಪಾಜೋವು ಎಂಬವರ ಮನೆಯಲ್ಲಿ ಗಣತಿ ಕಾರ್ಯ ಮಾಡುತ್ತಿದ್ದರು. ಈ ವೇಳೆ ಶಂಕರ ಪಾಜೋವು ಎಂಬವರು ರಸ್ತೆ ಬದಿಯಲ್ಲಿದ್ದ ಕಾರಿಗೆ ಕಬ್ಬಿಣದ ರಾಡ್ ನಿಂದ ಹಾನಿಗೊಳಿಸಿ ಕಾರಿನ ಹಿಂಬದಿ ಗಾಜನ್ನು ಪುಡಿಗೈದಿದ್ದಾರೆ. ಈ ಬಗ್ಗೆ ರಮಣಿಯವರು ಕಡಬ ಠಾಣೆ ಹಾಗೂ ಕಡಬ ತಹಶೀಲ್ದಾರ್ ಅವರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಆರೋಪಿ ಶಂಕರ ಪಾಜೋವುರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
- Advertisement -


