Friday, June 26, 2026
Homeಕರಾವಳಿಸುಳ್ಯ: ಮದರಸಾದಲ್ಲಿ ಪಾಠ ಮಾಡುತ್ತಿರುವಾಗಲೇ ಹೃದಯಾಘಾತವಾಗಿ ಶಿಕ್ಷಕ ಸಾವು

ಸುಳ್ಯ: ಮದರಸಾದಲ್ಲಿ ಪಾಠ ಮಾಡುತ್ತಿರುವಾಗಲೇ ಹೃದಯಾಘಾತವಾಗಿ ಶಿಕ್ಷಕ ಸಾವು

- Advertisement -
- Advertisement -

ಸುಳ್ಯ: ಮದರಸಾದಲ್ಲಿ ಪಾಠ ಮಾಡುತ್ತಿರುವಾಗಲೇ ಶಿಕ್ಷಕ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಸುಳ್ಯ ತಾಲೂಕಿನ ಕಳಂಜದಲ್ಲಿ ನಡೆದಿದೆ.

ಬೆಳ್ಳಾರೆಯ ತಂಬಿನಮಕ್ಕಿನಿವಾಸಿ ರಶೀದ್ ಮುಸ್ಲಿಯಾರ್ (51) ಮೃತ ದುರ್ದೈವಿ. ಕಳಂಜ ಮದರಸಾದ ಗುರುಗಳು ರಜದಲ್ಲಿದ್ದ ಹಿನ್ನೆಲೆ ರಶೀದ್ ಮುಸ್ಲಿಯಾರ್ ತಂಬಿನಮಕ್ಕಿಯಿಂದ ಪಾಠ ಮಾಡಲೆಂದು ಕಳಂಜ ಮದರಸಾಕ್ಕೆ ತೆರಳಿದ್ದರು. ಅದರಂತೆ ಪಾಠ ಮಾಡುತ್ತಿದ್ದಾಗ ಸುಮಾರು 7-30 ರ ವೇಳೆಗೆ ಅವರು ಕುಸಿದು ಬಿದ್ದಿದ್ದಾರೆ.

ಕೂಡಲೇ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾದ್ರೂ ಮಾಡಾವು ತಲುಪುತ್ತಿದ್ದಂತೆ  ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ನಿನ್ನೆಯೇ ಅವರು ಎದೆನೋವಿನ ಬಗ್ಗೆ ಮನೆಯವರಲ್ಲಿ ಹೇಳಿದ್ದರು ಎನ್ನಲಾಗಿದೆ. ಬೆಳ್ಳಾರೆಯಲ್ಲಿ ಹಲವು ವರ್ಷಗಳಿಂದ ಪುಸ್ತಕ ಹಾಗೂ ಸುಗಂಧ ದ್ರವ್ಯ ಅಂಗಡಿ ಹೊಂದಿದ್ದ ಅವರು ಬೇರೆ ಬೇರೆ ಮದರಸಾಗಳ ಗುರುಗಲು ರಜಾದಲ್ಲಿದ್ದಾಗ ತಾವು ಹೋಗಿ ಪಾಠ ಮಾಡುತ್ತಿದ್ದರು ಎನ್ನಲಾಗಿದೆ. ಮೃತರನ್ನು ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

- Advertisement -

Latest News

error: Content is protected !!