Thursday, June 4, 2026
Homeಕರಾವಳಿವಿಟ್ಲ: ಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು !

ವಿಟ್ಲ: ಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು !

- Advertisement -
- Advertisement -

ವಿಟ್ಲ : ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ.

13 ರಂದು ಬೆಳಿಗ್ಗೆ ವಿಟ್ಲ ಸಿಪಿಸಿಆರ್‌ಐ ಬಳಿ ಇರುವ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸೋಮವಾರ ಬೆಳಿಗ್ಗೆ ಬೇಗನೇ ಎದ್ದಿದ್ದರು, ಪತಿ ಸ್ನಾನದ ಕೋಣೆಯಲ್ಲಿದ್ದಾಗ ಇವರು ಹೊರಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಿಸಲಾಯಿತು, ಆದರೆ ಹೆಚ್ಚಿನ ಚಿಕಿತ್ಸೆಗೆ ಡಿ 13 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಿಟ್ಲ ನಿವಾಸಿ ಪ್ರಿಯಾ ಕುಮಾರಿ ( 48 ) ಮೃತಪಟ್ಟವರು .

ಪ್ರಸ್ತುತ ಪುತ್ತೂರು ತಾಲೂಕಿನ ಅರಿಯಡ್ಕ ಸಮೀಪದ ಪಾಪೆಜಾಲು ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಹಿಂದೆ ಪುತ್ತೂರಿನ ಹಾರಾಡಿ ಶಾಲೆಯಲ್ಲಿ ಪ್ರಭಾರ ಎಚ್ ಎಂ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಅವರನ್ನು ಪಾಪೆಜಾಲು ಹೈಸ್ಕೂಲಿಗೆ ವರ್ಗಾಯಿಸಲಾಗಿತ್ತು .

ವರ್ಗಾವಣೆ ನಿಮಿತ್ತ ಶುಕ್ರವಾರ ಪಾಪೆಮಜಲು ಶಾಲೆಯಲ್ಲಿ ಕೆಲಸ ಆರಂಭಿಸಿದರು. ಭಾನುವಾರ ರಜಾದಿನವಾಗಿದ್ದು , ಮನೆಯಲ್ಲೇ ಇದ್ದರು. ಹಾಗೇ ಇವರ ಪತಿ ನಿವೃತ್ತ ಯೋಧರಾಗಿದ್ದು , ಪ್ರಸ್ತುತ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು, ಪತಿಯನ್ನು ಅಗಲಿದ್ದಾರೆ

- Advertisement -

Latest News

error: Content is protected !!