Friday, March 29, 2024
Homeಕರಾವಳಿಕರಾವಳಿಯಲ್ಲಿ ಹೆದ್ದಾರಿ ದರೋಡೆಗೆ ಯತ್ನಿಸುತ್ತಿದ್ದ ಕುಖ್ಯಾತ ಟಿ.ಬಿ ಗ್ಯಾಂಗ್ ಅಂದರ್

ಕರಾವಳಿಯಲ್ಲಿ ಹೆದ್ದಾರಿ ದರೋಡೆಗೆ ಯತ್ನಿಸುತ್ತಿದ್ದ ಕುಖ್ಯಾತ ಟಿ.ಬಿ ಗ್ಯಾಂಗ್ ಅಂದರ್

spot_img
- Advertisement -
- Advertisement -

ಮಂಗಳೂರು: ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾತ್ರಿ ವೇಳೆಯಲ್ಲಿ ಹೆದ್ದಾರಿಯಲ್ಲಿ ದರೋಡೆ ನಡೆಸಲು ಸಂಚು ರೂಪಿಸಿದ್ದ ಕುಖ್ಯಾತ ಟಿ.ಬಿ ಗ್ಯಾಂಗ್ ನ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಮಾರ್ನಮಿಕಟ್ಟೆ ನಿವಾಸಿ ತೌಸಿರ್ ಯಾನೆ ಪತ್ತೊಂಜಿ ತೌಸಿರ್ (28 ವ), ಫರಂಗಿಪೇಟೆ ನಿವಾಸಿ ಮೊಹಮ್ಮದ್ ಅರಾಫತ್ (29 ವ), ತಸ್ಲಿಂ ( 27 ವ), ತುಂಬೆ ನಿವಾಸಿ ನಾಸೀರ್ ಹುಸೇನ್ ( 37 ವ), ಪುದು ನಿವಾಸಿ ಮೊಹಮ್ಮದ್ ರಫೀಕ್ (37 ವ), ಮೊಹಮ್ಮದ್ ಸಫ್ವಾನ್ ( 25 ವ), ಮೊಹಮ್ಮದ್ ಜೈನುದ್ದೀನ್ ( 24ವ) ಮತ್ತು ಮೊಹಮ್ಮದ್ ಉನೈಜ್ (26 ವ) ಬಂಧಿತ ಆರೋಪಿಗಳು.

ನಿನ್ನೆ ರಾತ್ರಿ ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಉಳಾಯಿಬೆಟ್ಟು ಗ್ರಾಮದ ಪರಾರಿ ಎಂಬಲ್ಲಿ ಇನ್ನೋವಾ ಕಾರನ್ನು ರಸ್ತೆ ಬದಿ ಪಾರ್ಕ್ ಮಾಡಿ, ಮಾರಾಕಾಯುಧಗಳೊಂದಿಗೆ ಗುಂಪಾಗಿ ನಿಂತುಕೊಂಡು ಹಾದುಹೋಗುವ ವಾಹನಗಳನ್ನು ಅಡ್ಡಹಾಕಲು ಯತ್ನಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

- Advertisement -
spot_img

Latest News

error: Content is protected !!