Saturday, May 4, 2024
Homeತಾಜಾ ಸುದ್ದಿತಾನ್ಯಾ ಹೋಪ್ ಹಾಟ್ ಫೋಟೋ ವೈರಲ್

ತಾನ್ಯಾ ಹೋಪ್ ಹಾಟ್ ಫೋಟೋ ವೈರಲ್

spot_img
- Advertisement -
- Advertisement -

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ʼಯಜಮಾನʼ ಸಿನಿಮಾದ ಬಸಣ್ಣಿ ಬಾ..ಹಾಡಿನ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ನಟಿ ತಾನ್ಯಾ ಹೋಪ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಯಕ್ಟಿವ್ ಇರ್ತಾರೆ.

ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ಹೊಸ ಹಾಟ್ ಫೋಟೋವೊಂದನ್ನು ತಾನ್ಯಾ ಹೋಪ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಎಂದಿಗೂ ಭೇಟಿಯಾಗಲಿಲ್ಲ ಎಂದು ಕ್ಯಾಪ್ಷನ್ ನೀಡಿದ್ದಾರೆ. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.

View this post on Instagram

Never met.. never parted

A post shared by Tanya Hope (@hope.tanya) on

ತಾನ್ಯಾ ಹೋಪ್ ಕನ್ನಡ.ತೆಲಗು ,ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. 2016 ರಿಂದ ತೆಲಗು ಚಿತ್ರಗಳ ಮೂಲಕ ಸಿನಿಪಯಣ ಆರಂಭಿಸಿದ ಇವರು ಚಾಲೆಂಜಿಂಗ್ ಸ್ಟಾರ್ ದರ್ಶನ್‌ರವರ `ಯಜಮಾನ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.

ಬೆಂಗಳೂರಿನ ಉದ್ಯಮಿಯೊಬ್ಬರ ಪುತ್ರಿಯಾಗಿ ಜನಿಸಿದ ತಾನ್ಯಾ ಬೆಂಗಳೂರಿನ ಸ್ಯಾಕ್ರೆಡ್ ಹಾರ್ಟ್ ಸ್ಕೂಲ್‌ನಲ್ಲಿ ವಿಧ್ಯಾಭ್ಯಾಸ ಮುಗಿಸಿದರು. ನಂತರ ಪದವಿಗಾಗಿ ಲಂಡನ್‌ನ ವೆಸ್ಟ್‌ಮಿಂಸ್ಟರ್' ಯುನಿವರ್ಸಿಟಿ ಸೇರಿದರು. ಇಲ್ಲಿಅಂತರಾಷ್ಟ್ರೀಯ ಸಂಬಂಧ’ಗಳ ವಿಷಯಗಳ ಮೇಲೆ ಪದವಿ ಮುಗಿಸಿದ್ದಾರೆ.

ಆನಂತರ ಭಾರತಕ್ಕೆ ಹಿಂದುರಿಗಿದ ಇವರು ಪುಣೆಯ ಟೈರಾ ಟ್ರೇನಿಂಗ್ ಸ್ಟುಡಿಯೋಸ್‌ನಲ್ಲಿ ಮಾಡೆಲಿಂಗ್ ತರಬೇತಿ ಪಡೆದರು. 2015 ರಲ್ಲಿ ಕೊಲ್ಕತ್ತಾದಲ್ಲಿ ಜರುಗಿದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದದ್ದು ವಿಶೇಷ. 2016 ರಲ್ಲಿ ತೆಲಗು ಚಿತ್ರನೇನು ಶೈಲಜಾ’ದಲ್ಲಿ ಅತಿಥಿ ಪಾತ್ರದ ಮೂಲಕ ಸಿನಿಪಯಣ ಆರಂಭಿಸಿದ ಇವರು ನಂತರ ಮೂರು ತೆಲಗು ಮತ್ತು ಒಂದು ತಮಿಳು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು.

ಕನ್ನಡದಲ್ಲಿ ಉಪೇಂದ್ರರ ಹೋಮ್ ಮಿನಿಸ್ಟರ್',ದರ್ಶನ್‌ರಯಜಮಾನ’, ಅಭಿಷೇಕ್ ಅಂಬರೀಶ್‌ರ ಅಮರ್' ಮತ್ತು ಸುನೀಲ್ ಕುಮಾರ ದೇಸಾಯಿವರಉದ್ಘರ್ಷ’ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

- Advertisement -
spot_img

Latest News

error: Content is protected !!