Saturday, May 18, 2024
Homeಕರಾವಳಿಬೆಳ್ತಂಗಡಿ : ಪರೀಕ್ಷೆಗೆ ಹೋಗುವಾಗ ಅಪಘಾತವಾಗಿ ಗಾಯಗೊಂಡ ಪ್ರಕರಣ : ವಿದ್ಯಾರ್ಥಿನಿ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್

ಬೆಳ್ತಂಗಡಿ : ಪರೀಕ್ಷೆಗೆ ಹೋಗುವಾಗ ಅಪಘಾತವಾಗಿ ಗಾಯಗೊಂಡ ಪ್ರಕರಣ : ವಿದ್ಯಾರ್ಥಿನಿ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್

spot_img
- Advertisement -
- Advertisement -

ಬೆಳ್ತಂಗಡಿ : ಪರೀಕ್ಷೆ ಬರೆಯಲು ತಾಯಿ ಜೊತೆ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ನಂತರ ಆಂಬುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದು ಇನ್ನೊಬ್ಬಳ ಮೂಲಕ ಪರೀಕ್ಷೆ ಬರೆಸಿ ವಾಪಸ್ ಉಜಿರೆ ಬೆನಕ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ವೇಳೆ ಆರೋಗ್ಯ ಹದಗೆಟ್ಟಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು‌ ಇದೀಗ ತನ್ವಿ ಗುಣಮುಖಳಾಗಿದ್ದು ಗುರುವಾರ ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಅಗಿ ತನ್ನ ಮನೆಗೆ ವಾಪಸಾಗಿದ್ದಾಳೆ‌.

ಘಟನೆ ವಿವರ : ಬೆಳ್ತಂಗಡಿ ತಾಲೂಕಿನ ಲಾಯಿಲ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಯ SSLC ವಿದ್ಯಾರ್ಥಿನಿ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಸಂಪಿಂಜಾ ನಿವಾಸಿ ಲಕ್ಷ್ಮಣ -ಮಮತಾ ದಂಪತಿಯ ಪುತ್ರಿ ತನ್ವಿ(15) ಎಪ್ರಿಲ್‌ 11 ರಂದು ಪರೀಕ್ಷೆ ಬರೆಯಲು ತನ್ನ ತಾಯಿ ಮಮತಾ ಜೊತೆ ಸ್ಕೂಟರ್ ನಲ್ಲಿ ಪರೀಕ್ಷಾ ಕೇಂದ್ರವಾದ ಬೆಳ್ತಂಗಡಿ ವಾಣಿ ಕಾಲೇಜ್ ಗೆ ಬರುತ್ತಿದ್ದಾಗ ಬೆಳ್ತಂಗಡಿಯ ಲಾಯಿಲದ ಪುತ್ರಬೈಲು ಅಂಗನವಾಡಿ ಎದುರು ಸ್ಕೂಟರ್ ಸ್ಕೀಡ್ ಅಗಿ ಪಲ್ಟಿಯಾಗಿದೆ ಈ ವೇಳೆ ತಾಯಿ ಮಮತಾಗೆ ಯಾವುದೇ ಗಾಯವಾಗಿಲ್ಲ ಮಗಳು ತನ್ವಿಗೆ ಮಾತ್ರ ಗಾಯವಾಗಿದ್ದು ತಕ್ಷಣ ಉಜಿರೆ ಬೆನಕ‌ ಆಸ್ಪತ್ರೆಗೆ ದಾಖಲಿಸಿ ವೈದ್ಯರು ಚಿಕಿತ್ಸೆ ನೀಡಿದ್ದು ಕೈ,ಕಾಲು ಹಾಗೂ ಮುಖಕ್ಕೆ ಗಾಯವಾಗಿದ್ದು ಯಾವುದೇ ಪ್ರಾಣಕ್ಕೆ ಅಪಾಯವಿಲ್ಲ ಎಂದು ವೈದ್ಯರು ಪರೀಕ್ಷೆ ಮಾಡಿ ತಿಳಿಸಿದ್ದರು.ಬಳಿಕ ತಾಯಿ ತನ್ನ ಮಗಳ ಶಾಲಾ ಆಡಳಿತ ಮಂಡಳಿಗೆ ಕರೆ ಮಾಡಿ ಮಾಹಿತಿ ನೀಡಿದ ತಕ್ಷಣ ಆಸ್ಪತ್ರೆಗೆ ಬಂದು ವಿಚಾರಿಸಿ ನಂತರ ಪರೀಕ್ಷೆ ಬರೆಯಲು ಸಾಧ್ಯವಾಗದೆ ಇರುವುದರಿಂದ ಅದೇ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ದಾಖಲೆಗಳನ್ನು ನೀಡಿ ಆಕೆ ಹೇಳಿದಾಗೆ ಪರೀಕ್ಷೆ ಬರೆಯಲು ಅವಕಾಶ ನೀಡಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ವಾಣಿ ಕಾಲೇಜಿನ ಪರೀಕ್ಷಾ ಮೇಲ್ವಿಚಾರರಿಗೆ ಮನವಿ ಮಾಡಿದ ಮೇರೆಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕೊಟ್ಟಿದ್ದರು.

ಉಜಿರೆ ಬೆನಕ ಆಸ್ಪತ್ರೆಯ ಮುಖಸ್ಥರಾದ ಡಾ.ಗೋಪಾಲಕೃಷ್ಣ ತಮ್ಮ ಆಸ್ಪತ್ರೆಯ ಆಂಬುಲೆನ್ಸ್ ನೀಡಿ ಅದರಲ್ಲಿ ನರ್ಸ್ ನಳಿನಾಕ್ಷಿ ಮತ್ತು ಚಾಲಕ ದಿನೇಶ್ ಇಬ್ಬರನ್ನು ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿನಿ ಜೊತೆ ನೋಡಿಕೊಳ್ಳಲು ಕಳುಹಿಸಿದ್ದರು. ಸೋಮವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನರ್ಸ್ ಮತ್ತು ಆಂಬುಲೆನ್ಸ್ ಚಾಲಕ ಅಲ್ಲೇ ಇದ್ದು ಪರೀಕ್ಷೆ ಮುಗಿದ ಬಳಿಕ ವಾಪಸ್ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆ ತಂದು ತ್ರೀವ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಿದ್ದರು. ಮಂಗಳವಾರ ತನ್ವಿಗೆ ಆರೋಗ್ಯದಲ್ಲಿ ಏರುಪೇರು ಅಗಿದ್ದಿಂದ ತಕ್ಷಣ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಗುರುವಾರ ಸಂಜೆ ಗುಣಮುಖರಾಗಿದ್ದರಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಬಂದಿದ್ದು ಇದೀಗ ತನ್ವಿ ಆರೋಗ್ಯವಾಗಿದ್ದಾಳೆ.

ವಿದ್ಯಾರ್ಥಿನಿ ತನ್ವಿ ಉತ್ತಮ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯಾಗಿದ್ದು ಅದಕ್ಕಾಗಿ ಕೊನೆಯ ಪರೀಕ್ಷೆ ಅಗಿರುವ ಕಾರಣ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಮಾತಾನಾಡಿ ಸೈಂಟ್ ಮೇರೀಸ್ ಆಂಗ್ಲಮಾಧ್ಯಮ ಶಾಲೆಯ 9 ನೇ ವಿದ್ಯಾರ್ಥಿನಿಯ ಮೂಲಕ ತನ್ವಿ ಸ್ಟಚ್ಚರ್ ನಲ್ಲಿಯೇ ಪರೀಕ್ಷಾ ಕೊಠಡಿಯಲ್ಲಿ ಮಲಗಿಕೊಂಡು ಆಕೆ ಹೇಳಿದ ಹಾಗೆ ಪಕ್ಕದಲ್ಲಿ ಕುಳಿತುಕೊಂಡು ಪರೀಕ್ಷೆ ಬರೆದು ಮುಗಿಸಿದ್ದಾಳೆ ಅದಲ್ಲದೆ ಸೈಂಟ್ ಮೇರೀಸ್ ಆಂಗ್ಲಮಾಧ್ಯಮ ಶಾಲಾ ಆಡಳಿತ ಮಂಡಳಿಯವರು ತಾಯಿಯ ಜೊತೆ‌ಯಲ್ಲಿದ್ದು ಸಹಕರಿಸಿದ್ದರು.

ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಯು ತಕ್ಷಣಕ್ಕೆ ಸ್ಪಂದಿಸಿ ಸಹಕರಿಸಿ ಮಾನವೀಯತೆ ತೋರಿದ್ದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!