Saturday, May 18, 2024
Homeಚಿಕ್ಕಮಗಳೂರುಗುಡುಗು-ಮಿಂಚಿನ ಸಮ್ಮಿಲನ: ಶೃಂಗೇರಿ ಶಾರದಾಂಬೆ ದೇಗುಲದ ನಯನ ಮನೋಹರ ದೃಶ್ಯ ಸೆರೆ

ಗುಡುಗು-ಮಿಂಚಿನ ಸಮ್ಮಿಲನ: ಶೃಂಗೇರಿ ಶಾರದಾಂಬೆ ದೇಗುಲದ ನಯನ ಮನೋಹರ ದೃಶ್ಯ ಸೆರೆ

spot_img
- Advertisement -
- Advertisement -

ಚಿಕ್ಕಮಗಳೂರು : ಗುಡುಗು-ಮಿಂಚಿನ ಸಮ್ಮಿಲನದಿಂದ ಇತಿಹಾಸದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಶೃಂಗೇರಿ ಶಾರದಾಂಬೆ ದೇಗುಲದ ಸುಂದರ ನೋಟ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಈ ಅತ್ಯದ್ಭುತ ಚಿತ್ರವನ್ನ ಸೆರೆ ಹಿಡಿಯಲು ಪ್ರಕೃತಿಯೇ ಸಾಕ್ಷಿಯಾಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಮಳೆ ಜೊತೆ ಗುಡುಗು-ಸಿಡಿಲಿನ ಅಬ್ಬರ ಕೂಡ ಜೋರಿದೆ. ಶೃಂಗೇರಿಯಲ್ಲೂ ಮಳೆ ಅಬ್ಬರ ಜೋರಾಗಿದೆ. ನಿನ್ನೆ ಮಳೆ ಆರಂಭಕ್ಕೂ ಮುನ್ನ ಆರಂಭವಾದ ಗುಡುಗು-ಸಿಡಿಲಿನ ಮಧ್ಯೆ ಶೃಂಗೇರಿ ಶಾರದಾಂಬೆ ದೇಗುಲದ ದೃಶ್ಯ ನೋಡುಗರ ಮನಸೊರೆಗೊಂಡಿದೆ. ನಿನ್ನೆ ಸಂಜೆ ವೇಳೆಗೆ ಶೃಂಗೇರಿ ದೇಗುಲದಲ್ಲಿ ಶಾರದಾಂಬೆ ದರ್ಶನಕ್ಕೆ ಬಂದಿದ್ದ ಭಕ್ತರೊಬ್ಬರು ಈ ಅಪರೂಪದ ಅತ್ಯದ್ಭುತ ಚಿತ್ರವನ್ನ ಸೆರೆ ಹಿಡಿದಿದ್ದಾರೆ.

ಶೃಂಗೇರಿ ಶಾರದಾಂಬೆ ದೇಗುಲವನ್ನ ಮಿಂಚಿನಿಂದ ಕೃತಕವಾಗಿ ಅಲಂಕರಿಸಿದಂತಿದೆ. ಪ್ರಕೃತಿಯೇ ಮಿಂಚಿನಿಂದ ಶಾರದಾಂಬೆ ದೇಗುಲಕ್ಕೆ ಲೈಟಿಂಗ್ ಸೌಲಭ್ಯ ಕಲ್ಪಿಸಿದಂತೆ ಭಾಸವಾಗಿದೆ. ದೇಗುಲದ ಮೇಲ್ಭಾಗದಲ್ಲೇ ಮಿಂಚು ಸಂಭವಿಸಿದ್ದರಿಂದ ಕಲ್ಲುಗಳಿಂದಲೇ ನಿರ್ಮಾಣಗೊಂಡಿರೋ ಪುರಾತನ ಶಾರದಾಂಬೆ ದೇಗುಲದ ಸೌಂದರ್ಯ ಕೂಡ ಮತ್ತಷ್ಟು ಇಮ್ಮಡಿಗೊಂಡಿದೆ. ಈ ಸುಂದರ ಕ್ಷಣವನ್ನ ಕಣ್ತುಂಬಿಕೊಂಡ ಭಕ್ತರು ತಮ್ಮ ಮೊಬೈಲ್ ನಲ್ಲಿ ಈ ಅಪರೂಪದ ಘಳಿಗೆಯನ್ನ ಸೆರೆ ಹಿಡಿದಿದ್ದಾರೆ.

- Advertisement -
spot_img

Latest News

error: Content is protected !!