- Advertisement -
- Advertisement -
ಕಲ್ಲೇರಿ: ಲಾಕ್‌ಡೌನ್‌ನಿಂದ ಬಡವರಿಗೆ ತೊಂದರೆಯಾಗದಂತೆ ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಕರಾಯ ಮತ್ತು ತಣ್ಣೀರುಪಂತ ಗ್ರಾಮಗಳ 6 ವಾರ್ಡ್ ಗಳ 150 ಅರ್ಹ ಬಡ ಕುಟುಂಬಗಳಿಗೆ ಅಕ್ಕಿ ವಿತರಿಸಲಾಯಿತು.
ಕಲ್ಲೇರಿಯ ಗ್ರಾಮ ಪಂಚಾಯಿತಿನಲ್ಲಿ ತಣ್ಣೀರುಪಂತ ಗ್ರಾಮ ಪಂಚಾಯತಿ ಸದಸ್ಯರು, ತಣ್ಣೀರುಪಂತ ಸಿ.ಎ ಬ್ಯಾಂಕ್, ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘ, ಕರಾಯ ಮೂರ್ತೆದಾರರ ಸೇವಾ ಸಂಘ, ಕರಾಯ ಶ್ರೀ ಕೃಷ್ಣ ಭಜನಾ ಮಂಡಳಿ, ಕಲ್ಲೇರಿ ನವಚೇತನ ರೈತ ಉತ್ಪಾದಕ ಸಂಘದ ಸಹಕಾರದಿಂದ 6 ವಾರ್ಡ್ ಗಳಲ್ಲಿ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಜಯವಿಕ್ರಮ, ಪಿಡಿಒ ಪೂಣರ್ ಮಾ, ಸದಸ್ಯರಾದ ಯೂಸುಫ್, ತಾಜುದ್ದೀನ್, ನವೀನ್ಕುಮಾರ್, ವಿವಿಧ ಸಂಘಸಂಸ್ಥೆಗಳ ಪ್ರಮುಖರಾದ ನಿರಂಜನ್, ಸುರೇಂದ್ರ, ಜಯರಾಜ್, ಜನಾರ್ದನ್, ಜಗನ್ನಾಥ ಶೆಟ್ಟಿ, ದುಗ್ಗಪ್ಪ ಗೌಡ ಮತ್ತು ಸ್ವಯಂ ಸೇವಕರು ಉಪಸ್ಥಿತರಿದ್ದರು.
- Advertisement -