Tuesday, July 1, 2025
Homeತಾಜಾ ಸುದ್ದಿಕನ್ನಡದ ಅವತರಣಿಕೆಯಲ್ಲಿ ತಮಿಳಿನ ಗಾರ್ಗಿ: ಸಾಯಿಪಲ್ಲವಿ ಚಿತ್ರಕ್ಕೆ ರಕ್ಷಿತ್‌ ಶೆಟ್ಟಿ ಸಾಥ್‌

ಕನ್ನಡದ ಅವತರಣಿಕೆಯಲ್ಲಿ ತಮಿಳಿನ ಗಾರ್ಗಿ: ಸಾಯಿಪಲ್ಲವಿ ಚಿತ್ರಕ್ಕೆ ರಕ್ಷಿತ್‌ ಶೆಟ್ಟಿ ಸಾಥ್‌

spot_img
- Advertisement -
- Advertisement -

ರಕ್ಷಿತ್ ಶೆಟ್ಟಿ ನಟನೆ, ನಿರ್ದೇಶನದ ಜೊತೆಗೆ ನೂತನ ಪ್ರತಿಭೆಗಳಿಗೆ ತಮ್ಮ ನಿರ್ಮಾಣದ ಮೂಲಕ ವೇದಿಕೆಯನ್ನು ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ “ಪರಂವಾ ಪಿಕ್ಚರ್ಸ್ ಮೂಲಕ ಪರ ಭಾಷಾ ಚಿತ್ರಗಳನ್ನು ಕನ್ನಡ ಅವತರಣಿಕೆಯಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ.

ತಮಿಳು ನಟಿ ಸಾಯಿ ಪಲ್ಲವಿ ಅಭಿನಯದ “ಗಾರ್ಗಿ’ ಚಿತ್ರ ಜುಲೈ 15 ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು “ಪರಂವಾ ಪಿಕ್ಚರ್ಸ್’ ಕನ್ನಡದಲ್ಲಿ ಪ್ರಸ್ತುತ ಪಡಿಸಲಿದೆ. “ಕೆ.ಆರ್.ಜಿ ಸ್ಟುಡಿಯೋಸ್’ ಮೂಲಕ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಗೌತಮ್ ರಾಮಚಂದ್ರನ್ ನಿರ್ದೇಶನದ ಈ ಚಿತ್ರ ತಮಿಳಿನಲ್ಲಿ ನಿರ್ಮಾಣವಾಗಿದ್ದು, ಕನ್ನಡ ಹಾಗೂ ತೆಲುಗಿಗೆ ಡಬ್ ಆಗಿದೆ. ರವಿಚಂದ್ರನ್ ರಾಮಚಂದ್ರನ್, ಐಶ್ವರ್ಯಾ ಲೆಕ್ಷಿ, ಥಾಮಸ್ ಜಾರ್ಜ್ ಹಾಗೂ ಗೌತಮ್ ರಾಮಚಂದ್ರನ್ ನಿರ್ಮಿಸಿರುವ ಈ ಚಿತ್ರಕ್ಕೆ ಗೋವಿಂದ್ ವಸಂತ ಸಂಗೀತ ನೀಡಿದ್ದು, ಸೈಯಂತಿ ಹಾಗೂ ಪ್ರೇಮ್ ಅಕ್ಕಟ್ಟು ಛಾಯಾಗ್ರಹಣವಿದೆ. ಶಫಿಕ್ ಮೊಹಮದ್ ಅಲಿ ಸಂಕಲನ ಈ ಚಿತ್ರಕ್ಕಿದೆ. ಸಾಯಿಪಲ್ಲವಿ, ಕಾಳಿ ವೆಂಕಟ್, ಸರವಣನ್, ಜಯಪ್ರಕಾಶ್, ಆರ್.ಎಸ್. ಶಿವಾಜಿ, ಲಿವಿಂಗ್ ಸ್ಟನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

- Advertisement -
spot_img

Latest News

error: Content is protected !!