Sunday, June 2, 2024
Homeತಾಜಾ ಸುದ್ದಿಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ: ಸ್ಪೋಟಕ ಮಾಹಿತಿ ಲಭ್ಯ..! ಗುರೂಜಿಯ ಆಪ್ತನಿಂದಲೇ ಹತ್ಯೆ?

ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ: ಸ್ಪೋಟಕ ಮಾಹಿತಿ ಲಭ್ಯ..! ಗುರೂಜಿಯ ಆಪ್ತನಿಂದಲೇ ಹತ್ಯೆ?

spot_img
- Advertisement -
- Advertisement -

ಸರಳ ವಾಸ್ತು ಖ್ಯಾತಿಯ ಖ್ಯಾತ ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ ಗುರೂಜಿಯವರ ಕೊಲೆಗೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿಯೊಂದು ಮಾಧ್ಯಮಗಳಿಗೆ ಲಭ್ಯವಾಗಿದೆ. ಗುರೂಜಿ ಹತ್ಯೆಯ ಆರೋಪಿ ಮಹಾಂತೇಶ್ ಶಿರೂರ್ ಎನ್ನಲಾಗಿದ್ದು, ಆತನ ಕುರಿತಾದ ಹೆಚ್ಚಿನ ಮಾಹಿತಿ ಸಿಕ್ಕಿದೆ. ಸಿಸಿ ಟಿವಿ ದೃಶ್ಯದಲ್ಲಿ ಗುರೂಜಿಯ ಆಪ್ತ ಮಹಾಂತೇಶ ಶಿರೂರ್ ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಮಹಾಂತೇಶ್ ಪತ್ನಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಗುರೂಜಿ ಜೊತೆಗಿದ್ದ ಕೆಲಸಗಾರರಿಂದಲೇ ಹತ್ಯೆ ನಡೆದಿದೆಯಾ ಎಂಬ ಮತ್ತೊಂದು ಅನುಮಾನವೂ ವ್ಯಕ್ತವಾಗುತ್ತಿದೆ. ಹುಬ್ಬಳ್ಳಿ ಪೊಲೀಸರಿಗೆ ಹಂತಕರ ಖಚಿತ ಮಾಹಿತಿ ಲಭ್ಯವಾಗಿದೆ ಎಂಬ ಮಾಹಿತಿ ಸಿಕ್ಕಿದ್ದು, ಗುರೂಜಿ ಕೊಲೆಗೆ ರಿಯಲ್ ಎಸ್ಟೇಟ್ ವ್ಯವಹಾರವೇ ಕಾರಣ ಎಂಬ ಮಾತು ಕೇಳಿ ಬರುತ್ತಿದೆ.

ಇನ್ನು ಸಿಸಿಟಿವಿಯಲ್ಲಿ ಹತ್ಯೆ ಆರೋಪಿ ಮಹಾಂತೇಶ್ ಶಿರೂರು ದೃಶ್ಯಾವಳಿ ಸೆರೆಯಾಗಿದೆ. ಗುರೂಜಿ ಜೊತೆ ಬಹಳ ವರ್ಷದಿಂದ ಜತೆಗಿದ್ದವರೇ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದ್ದು, ಗೋಕುಲ್ ರೋಡ್ನ ಗೂರೂಜಿ ಅಪಾರ್ಟ್ಮೆಂಟ್ನಲ್ಲೇ ಆರೋಪಿ ವಾಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಗೋಕುಲ್ ರಸ್ತೆ ಡೆಕತ್ಲಾನ್ ಹಿಂಭಾಗದ ಅಪಾರ್ಟ್ಮೆಂಟ್ನಲ್ಲಿದ್ದ ಗುರೂಜಿ ಅವರ ಜೊತೆಯಲ್ಲೇ ಆರೋಪಿ ಇದ್ದ ಎಂದು ತಿಳಿದು ಬಂದಿದೆ.

ಮಹಾಂತೇಶ್ ಶಿರೂರು ವಿರುದ್ಧ ಗುರೂಜಿ ಕುಟುಂಬಸ್ಥರೂ ಅನುಮಾನ ವ್ಯಕ್ತಪಡಿಸಿದ್ದು, ಇದೀಗ ಮಹಾಂತೇಶ್ ಶಿರೂರನ ಪತ್ನಿ ವನಜಾಕ್ಷಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

2016 ರ ವರೆಗೂ ಗುರೂಜಿ ಜತೆಗೇ ಇದ್ದ ಮಹಾಂತೇಶ್ ಶಿರೂರು, 2019 ರವರೆಗೂ ಗುರೂಜಿ ಸಂಸ್ಥೆಯಲ್ಲೇ ಕೆಲಸ ಮಾಡುತ್ತಿದ್ದ. ಆರೋಪಿ ಮಹಾಂತೇಶ್ ಶಿರೂರನಿಗೆ ವನಜಾಕ್ಷಿ ಜೊತೆ ಮದುವೆ ಮಾಡಿಸಿದ್ದೇ ಚಂದ್ರಶೇಖರ್ ಗುರೂಜಿ ಎಂದು ತಿಳಿದು ಬಂದಿದೆ. ಆದರೆ ಗುರೂಜಿ ಜತೆ ವ್ಯವಹಾರ ಚಟುವಟಿಕೆ ವಿಚಾರದಲ್ಲಿ ಭಿನ್ನಭಿಪ್ರಾಯ ಎದುರಾದ ಕಾರಣ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಚಂದ್ರಶೇಖರ್ ಗುರೂಜಿ ಸಂಬಂಧಿಕರು ಈ ಕುರಿತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ 008 ರ ಫ್ಲಾಟ್‌ನಲ್ಲಿ ಗುರೂಜಿ ಇದ್ದರು. ಇದೇ ಅಪಾರ್ಟ್‌ಮೆಂಟ್‌ನ 308 ರಲ್ಲಿ ಮಹಾಂತೇಶ್ ವಾಸವಾಗಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

- Advertisement -
spot_img

Latest News

error: Content is protected !!