Sunday, June 7, 2026
Homeತಾಜಾ ಸುದ್ದಿಅಪ್ಪು ಕನಸು ಈಡೇರಿಸಲು ಶಕ್ತಿಧಾಮಕ್ಕೆ ಭೇಟಿ ಕೊಟ್ಟ ತಮಿಳು ನಟ ವಿಶಾಲ್

ಅಪ್ಪು ಕನಸು ಈಡೇರಿಸಲು ಶಕ್ತಿಧಾಮಕ್ಕೆ ಭೇಟಿ ಕೊಟ್ಟ ತಮಿಳು ನಟ ವಿಶಾಲ್

- Advertisement -
- Advertisement -

ಮೈಸೂರು: ತಮಿಳು ನಟ ವಿಶಾಲ್ ಇಂದು ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿ ಸುಮಾರು ಎರಡು ಗಂಟೆಗಳ ಕಾಲ ಇಲ್ಲಿನ ಮಕ್ಕಳೊಂದಿಗೆ ಕಾಲ ಕಳೆದಿದ್ದಾರೆ.

ಬೆಳಗ್ಗೆ 11.30ರ ಸುಮಾರಿಗೆ ಶಕ್ತಿಧಾಮಕ್ಕೆ ಆಗಮಿಸಿದ ವಿಶಾಲ್ ಗೆ ಮಕ್ಕಳು ಸರಳ ಸ್ವಾಗತ ನೀಡಿದ್ರು. ಮಕ್ಕಳ ಹಾಡು, ಕುಣಿತ ಹಾಗೂ ಮಕ್ಕಳೊಡನೆ ಮಾತನಾಡಿ ಹೊರ ಬಂದ ವಿಶಾಲ್ ಮಕ್ಕಳ ಜೊತೆ ಕುಳಿತು ಫೋಟೊ ತೆಗೆಸಿಕೊಂಡ್ರು.

ಶಕ್ತಿಧಾಮವನ್ನ ದೇವಾಲಯಕ್ಕೆ ಹೋಲಿಸಿದ ವಿಶಾಲ್, ಅಲ್ಲಿ ಮಕ್ಕಳಲ್ಲೇ ದೇವರನ್ನ ಕಂಡೆ. ಇಂತಹ ಪವಿತ್ರ ಸ್ಥಳದಲ್ಲಿ ಸ್ವಯಂ ಸೇವಕನಾಗಲು ಬಯಸುತ್ತೇನೆ. ಯಾವ ಸಮಯದಲ್ಲಿ ಕರೆ ಮಾಡಿದ್ರೂ ಶಕ್ತಿಧಾಮದ ಸಹಾಯಕ್ಕೆ ನಿಲ್ಲುತ್ತೇನೆಂದು ಹೇಳಿದ್ರು. ಇದಕ್ಕೆ ರಾಜ್ ಕುಟುಂಬದ ಅನುಮತಿಯನ್ನ ಸಹ ಕೇಳಿಕೊಂಡ್ರು.

- Advertisement -

Latest News

error: Content is protected !!