Monday, April 29, 2024
Homeತಾಜಾ ಸುದ್ದಿಬಂಟ್ವಾಳ: ತಾಲೂಕು ಮಟ್ಟದ ಕಡತ ವಿಲೇವಾರಿ ಸಪ್ತಾಹ-2022 ಕಾರ್ಯಕ್ರಮ

ಬಂಟ್ವಾಳ: ತಾಲೂಕು ಮಟ್ಟದ ಕಡತ ವಿಲೇವಾರಿ ಸಪ್ತಾಹ-2022 ಕಾರ್ಯಕ್ರಮ

spot_img
- Advertisement -
- Advertisement -

ಬಂಟ್ವಾಳ: ಕಡತ ವಿಲೇವಾರಿ ಕಾರ್ಯಕ್ರಮವನ್ನು ಅಧಿಕಾರಿಗಳು ತಮ್ಮದೇ ಕಾರ್ಯಕ್ರಮ ಎಂಬ ಭಾವನೆಯಿಂದ ಕೆಲಸ ಮಾಡಿದಾಗ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗುವ ಜತೆಗೆ ಸರಕಾರವು ಕೆಲಸ ಮಾಡುತ್ತಿದೆ ಎಂಬುದನ್ನು ಜನರಿಗೆ ತೋರಿಸಿದಂತಾಗುತ್ತದೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.  

ಅವರು ಬಿ.ಸಿ.ರೋಡಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಕಡತ ವಿಲೇವಾರಿ ಸಪ್ತಾಹ-೨೦೨೨ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತಹಶೀಲ್ದಾರ್ ರಶ್ಮಿ ಎಸ್.ಆರ್.ಮಾತನಾಡಿ, ಪ್ರಸ್ತುತ ಕಡತ ವಿಲೇವಾರಿಯಲ್ಲಿ ಮೂರು ಅನುಬಂಧಗಳನ್ನು ನೀಡಲಾಗಿದ್ದು, ಹಳೆಯ ಕಡತಗಳು, ಸಾರ್ವಜನಿಕರ ದೂರು ಅರ್ಜಿಗಳು, ಸೇವೆಗಳ ವಿತರಣಾ ಅರ್ಜಿಗಳು ಹೀಗೆ ಎಲ್ಲವನ್ನೂ ಎಲ್ಲಾ ಇಲಾಖೆಗಳ ಅಧಿಕಾರಿಗಳು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ, ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ, ಕೃಷಿ ಸಹಾಯಕ ನಿರ್ದೇಶಕ ಚೆನ್ನಕೇಶವಮೂರ್ತಿ, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಬಂಟ್ವಾಳ ಸಿಡಿಪಿಒ ಗಾಯತ್ರಿ ಕಂಬಳಿ, ವಿಟ್ಲ ಸಿಡಿಪಿಒ ಉಷಾ ಡಿ, ಮೆಸ್ಕಾಂ ಎಇಇ ಪ್ರಶಾಂತ್ ಪೈ, ಉಪನೋಂದಣಾಧಿಕಾರಿ ಕವಿತಾ ಎ.ಸಿ., ಪ್ರಾದೇಶಿಕ ಸಾರಿಗೆ ಇಲಾಖೆ ಟ್ರಾಫಿಕ್ ಇನ್ಸ್‌ಪೆಕ್ಟರ್ ಚರಣ್, ತಾಲೂಕು ಕಚೇರಿಯ ಕೇಂದ್ರ ಸ್ಥಾನೀಯ ಶಿರಸ್ತೇದಾರ್ ನರೇಂದ್ರನಾಥ್ ಮಿತ್ತೂರು, ಉಪತಹಶೀಲ್ದಾರ್‌ಗಳಾದ ದಿವಾಕರ ಮುಗುಳಿಯ, ವಿಜಯ ವಿಕ್ರಮ್, ಕಂದಾಯ ನಿರೀಕ್ಷಕರಾದ ವಿಜಯ್ ಆರ್, ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು.
ಕಂದಾಯ ನಿರೀಕ್ಷಕ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. 

- Advertisement -
spot_img

Latest News

error: Content is protected !!