Tuesday, April 30, 2024
Homeತಾಜಾ ಸುದ್ದಿಮುಂಬೈ: ಎರಡು ತಾಜ್​ ಹೋಟೆಲ್​ ಗೆ ಪಾಕ್‌ನಿಂದ ಬಾಂಬ್ ಬೆದರಿಕೆ ಕರೆ

ಮುಂಬೈ: ಎರಡು ತಾಜ್​ ಹೋಟೆಲ್​ ಗೆ ಪಾಕ್‌ನಿಂದ ಬಾಂಬ್ ಬೆದರಿಕೆ ಕರೆ

spot_img
- Advertisement -
- Advertisement -

ಮುಂಬೈ: ತಾಜ್ ಹೋಟೆಲ್ ಮತ್ತು ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್‌ಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಸೋಮವಾರ ಮಧ್ಯರಾತ್ರಿ ಲಷ್ಕರ್-ಎ-ತಯಬಾ ಉಗ್ರ ಸಂಘಟನೆಯ ಸದಸ್ಯನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಕರೆ ಮಾಡಿ ಬಾಂಬ್ ಬೆದರಿಕೆಯೊಡ್ಡಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಹೋಟೆಲ್‌ನ ಸುತ್ತ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.

ಪಾಕಿಸ್ತಾನ ಮತ್ತು ಶ್ರೀಲಂಕಾದಿಂದ ಕರೆ
ಮೊದಲು ತಾಜ್​ ಮಹಲ್​ ಪ್ಯಾಲೇಸ್​​ಗೆ ಕರೆ ಬಂದಿದೆ. ರಾತ್ರಿ ಪಾಳಿಯಲ್ಲಿದ್ದ ಸಿಬ್ಬಂದಿ ಅದನ್ನು ಸ್ವೀಕರಿಸಿದ್ದಾರೆ. ಕರೆ ಮಾಡಿದ ವ್ಯಕ್ತಿ ತಾನು ಎಲ್​ಇಟಿಗೆ ಸೇರಿದ ಉಗ್ರ, ತಾಜ್ ಹೊಟೆಲ್​ನ್ನು ಸರ್ವನಾಶ ಮಾಡುತ್ತೇವೆ. 2008ರಲ್ಲಿ ನಡೆಸಿದ್ದಂತಹ ದಾಳಿಯನ್ನು ಇನ್ನೊಮ್ಮೆ ನಡೆಸುತ್ತೇವೆ ಎಂದು ಹೇಳಿದ್ದಾನೆ.

ಅದಾದ ಬಳಿಕ ಎರಡನೇ ಕರೆಯನ್ನು ಬಾಂದ್ರಾದಲ್ಲರಿಉವ ತಾಜ್​ ಲ್ಯಾಂಡ್​ ಎಂಡ್​ ಹೋಟೆಲ್​ಗೆ ಮಾಡಿ, ನಾನು ಪಾಕಿಸ್ತಾನದಿಂದ ಮಾತನಾಡುತ್ತಿದ್ದೇನೆ ಎಂದು ಹೇಳಿಕೊಂಡು, ದಾಳಿಯ ಬೆದರಿಕೆ ಹಾಕಿದ್ದಾನೆ. ಎರಡೂ ಕರೆಗಳೂ ಒಂದೇ ನಂಬರ್​​ನಿಂದ ಬಂದಿವೆ.

ಪಾಕಿಸ್ತಾನದ ಕರಾಚಿಯಲ್ಲಿ ಉಗ್ರ ದಾಳಿ ನಡೆದ ಬೆನ್ನಲ್ಲೇ ಬೆದರಿಕೆ ಕರೆಗಳು ಬಂದಿರುವುದು ಆತಂಕ ಸೃಷ್ಟಿಸಿದೆ.

- Advertisement -
spot_img

Latest News

error: Content is protected !!